ಚಿಕ್ಕಮಗಳೂರು: 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಜ.8 ರಂದು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜನೆ ಮಾಡಲಾಗಿದೆ ಎಂದು ದಲಿತ ಒಕ್ಕೂಟಗಳ ಸಮಿತಿ ಸದಸ್ಯ ಅನೀಲ್ ಕುಮಾರ್ ತಿಳಿಸಿದರು.

ಜ.7ರಂದು ಬೆಳಿಗ್ಗೆ 10.30ಕ್ಕೆ ನಗರದ ತೊಗರಿಹಂಕಲ್ ಸರ್ಕಲ್ನಿಂದ ಕೆಇಬಿ ವೃತ್ತ, ಅರಳಿಮರ ರಸ್ತೆ, ಎಂ.ಜಿ. ರಸ್ತೆ, ಅಜಾದ್ ಪಾರ್ಕ್, ಅಂಬೇಡ್ಕರ್ ರಸ್ತೆ, ಕೆ.ಎಂ. ರಸ್ತೆ ಮೂಲಕ ಜಿಲ್ಲಾ ಪಂಚಾಯಿತಿ ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

8ರಂದು ಮಧ್ಯಾಹ್ನ 12.30ಕ್ಕೆ ನಗರದ ಕೆಇಬಿ ವೃತ್ತದಿಂದ ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ವರೆಗೆ ಡಿಜೆ ಮತ್ತು ವಿವಿಧ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ಹಾಗೂ ಮಧ್ಯಾಹ್ನ 4.30ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದಲ್ಲಿ ಜೇವರ್ಗಿ ಜಗದ್ಗುರು ಮರುಳ ಶಂಕರ ದೇವರ ಗುರುಪೀಠ ಸಿದ್ದಬಸವ ಕಬೀರ ಮಹಾ ಸ್ವಾಮೀಜಿ, ಭೀಮ್ ಆರ್ಮಿ ಸಂಘಟನೆ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶದ ಸಂಸದ ಚಂದ್ರಶೇಖರ್ ಅಜಾದ್ ರಾವಣ್, ಸಂಸದ ಶಶಿಕಾಂತ್ ಸೇಂಥಿಲ್, ಸಾಮಾಜಿಕ ಹೋರಾಟಗಾರ ಜಕ್ಕಪ್ಪನವರ, ಅಂಬೇಡ್ಕರ್ ವಾದಿ ದು.ಸರಸ್ವತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭೀಮ್ ಆರ್ಮಿ ಸಂಘಟನೆ ಅಧ್ಯಕ್ಷ ಹೊನ್ನೇಶ್, ದಲಿತ ಮುಖಂಡರಾದ ಹರೀಶ್ ಮಿತ್ರ, ರಾಜು ಉಪ್ಪಳ್ಳಿ, ರಮೇಶ್, ಹುಣಸೇಮಕ್ಕಿ ಲಕ್ಷ್ಮಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.