ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕರಿಗೆ ಧ್ವನಿಯಾಗಿ: ಕೋಟ

ಗೌರಿಗದ್ದೆಯಲ್ಲಿ ‘ಗಾಂಧಿ ಕುಟೀರ ಲೋಕಾರ್ಪಣೆ’
Last Updated 13 ಮಾರ್ಚ್ 2022, 3:39 IST
ಅಕ್ಷರ ಗಾತ್ರ

ಕೊಪ್ಪ: ‘ಸಮಾಜದಲ್ಲಿ ಅಸಹಾಯಕ ರಾದವರಿಗೆ ಧ್ವನಿ ಕೊಡಬೇಕಾದ ಅಗತ್ಯವಿದೆ’ ಎಂದು ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗೌರಿಗದ್ದೆ ದತ್ತಾಶ್ರಮದಲ್ಲಿ ಶನಿವಾರ ಮಹಾತ್ಮ ಗಾಂಧಿ ಸೇವಾಟ್ರಸ್ಟ್, ತಿರುಮಲ ಟ್ರಸ್ಟ್, ಕಸ್ತೂರ ಬಾ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ‘ಗಾಂಧಿ ಕುಟೀರ ಲೋಕಾರ್ಪಣೆ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಶೈಕ್ಷಣಿಕ ಪ್ರಗತಿ 75 ವರ್ಷಗಳ ಬಳಿಕ ಶೇ 80ಕ್ಕೆ ತಲುಪಿದೆ. ಆದರೆ, ಅಪರಾಧ ಪ್ರಕರಣ ಕಡಿಮೆಯಾಗಿಲ್ಲ. ನಿಶ್ಚಿತ ಅಭಿವೃದ್ಧಿ ತಲುಪಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಇಲಾಖೆ ವತಿಯಿಂದ 1,704 ಶಾಲೆಗಳಲ್ಲಿ 1.20 ಲಕ್ಷ ಹೆಣ್ಣು ಮಕ್ಕಳು ಪ್ರಥಮ ಹಂತದಲ್ಲಿ ಕರಾಟೆ ಕಲಿಯುತ್ತಿದ್ದಾರೆ. ಸಂಸ್ಕಾರಯುತ ಸಮಾಜದಲ್ಲಿ ಇದ್ದರೂ ಹೆಣ್ಣಿನ ಮೇಲೆ ದೌರ್ಜನ್ಯ ನಿಂತಿಲ್ಲ, ಆತ್ಮರಕ್ಷಣೆ ಕಲೆ ಬೇಕು. ಆದ್ದರಿಂದ ‘ವೀರನಾರಿ ಓಬವ್ವ ಆತ್ಮರಕ್ಷಣೆ ಕಲೆ’ ಎಂಬ ಹೆಸರಿಟ್ಟೆ’ ಎಂದರು.

ವಿನಯ ಗುರೂಜಿ ಮಾತನಾಡಿ, ‘ನನ್ನ ಜನ್ಮದಿನ ಆಚರಣೆ ಬದಲಾಗಿ ಆ ಹಣವನ್ನು ಬಡವರ ಅಭಿವೃದ್ಧಿಗೆ ನೀಡುತ್ತಿದ್ದೇನೆ. ನಮ್ಮ ಆಶ್ರಮದಲ್ಲಿ ಮನುಷ್ಯರಿಗೆ ಮಾತ್ರ ಪ್ರವೇಶ. ಜಾತಿ, ಧರ್ಮ ಕಾರಣಕ್ಕೆ ಪ್ರವೇಶವಿಲ್ಲ. ಮೇಲ್ವರ್ಗ, ಕೆಳವರ್ಗ ಎಂಬುದು ಮೂರ್ಖತನದ ಪರಮಾವಧಿ. ಗಾಂಧಿ ತತ್ವವನ್ನು ಪಾಲಿಸುವ ಕೋಟ ಶ್ರೀನಿವಾಸ ಪೂಜಾರಿ ನಡೆದಾಡುವ ಗಾಂಧಿ ಇದ್ದಂತೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತ ನಾಡಿ, ‘ಅಪೇಕ್ಷೆ ಇಲ್ಲದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕಡಿಮೆಯಿದೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಬಡವರ ಕಷ್ಟಕ್ಕೆ ವಿನಯ ಗುರೂಜಿ ಸ್ಪಂದಿಸಿದ್ದಾರೆ, ಅವರದು ಸಮಾಜಮುಖಿ ಕೆಲಸ’ ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ‘ಸುಂದರವಾದ ಕಾರ್ಯಕ್ರಮ ಮಾಡಲು ಎಲ್ಲರಿಗೂ ಸಾಧ್ಯವಿದೆ. ಆದರೆ, ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಹಾಗೂ ಅಪೇಕ್ಷೆ ರಹಿತ, ಜನಪರವಾದ ಕಾರ್ಯಕ್ರಮ ಮಾಡಲು ವಿನಯ ಗುರೂಜಿ ಅವರಿಂದ ಸಾಧ್ಯವಾಗಿದೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ‘ಅವಧೂತರು ಸಾಮಾನ್ಯ ಕುಟುಂಬದಲ್ಲಿ ಜನಿಸುತ್ತಾರೆ. ಸಮಾಜದ ಕಷ್ಟವನ್ನು ಅರ್ಥ ಮಾಡಿಕೊಂಡು ಅವರ ಬದುಕಿಗೆ ಸ್ಪಂದಿಸಲು ಶ್ರಮಿಸುತ್ತಾರೆ. ಅವಧೂತರು ಮಾಡುವ ಕೆಲಸ ಯಾವ ರಾಜಕೀಯದವರೂ ಮಾಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಆಹಾರ ಕಿಟ್ ವಿತರಣೆ, ತಡೆ ಗೋಡೆ ನಿರ್ಮಾಣಕ್ಕೆ ಭೂಮಿಪೂಜೆ, ಸಹಾಯಧನ ವಿತರಣೆ, ಜವಳಿ ಮತ್ತು ಮಾಂಗಲ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ಕ್ರಮ ನಡೆಯಿತು. ಆಂಧ್ರಪ್ರದೇಶದ ಶಾಸಕ ಎಂ.ಎಸ್.ರೆಡ್ಡಿ, ಸೇವಾ ಟ್ರಸ್ಟ್‌ನ ಕೋಣಂದೂರು ಇದ್ದರು.

‘ವಿನಯ ಸಾಮರಸ್ಯ’ ಯೋಜನೆ

‘ಕೊಪ್ಪಳ ಜಿಲ್ಲೆಯಲ್ಲಿ 6 ತಿಂಗಳ ಹಿಂದೆ 2 ವರ್ಷದ ಮಗು ದೇವಸ್ಥಾನದ ಒಳಗೆ ಹೋಗಿದ್ದ ಕಾರಣಕ್ಕೆ ಸಮಿತಿಯವರು ಪೋಷಕರಿಗೆ ₹ 25 ಸಾವಿರ ದಂಡ ಹಾಕಿಸಿದ್ದರು. ಆ ಮಗುವಿನ ಶೈಕ್ಷಣಿಕ ಖರ್ಚು ಭರಿಸಲು ದತ್ತು ತೆಗೆದುಕೊಂಡಿದ್ದೇನೆ. ಪರಿಶಿಷ್ಟರ ಮನೆಗೆ ಸಮಾನತೆ ಸಂದೇಶ ಕೊಡಲು ಜನಾಂದೋಲನ ಮಾಡಬೇಕೆಂಬ ಕನಸಿದೆ. ‘ವಿನಯ ಸಾಮರಸ್ಯ’ ಯೋಜನೆ ರೂಪಿಸಿದ್ದೇವೆ. ವಿನಯ ಗುರೂಜಿ ಅವರು ಇಂತಹ ಕಾರ್ಯಕ್ರಮಕ್ಕೆ ಪ್ರೇರಣೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT