ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಯೋಜನೆಗೆ ಭೂಸ್ವಾಧೀನ: ಪರಿಹಾರ ನೀಡಲು ಆಗ್ರಹ

Last Updated 5 ಆಗಸ್ಟ್ 2022, 10:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪರದೇಶಪ್ಪನ ಮಠ ಪ್ರದೇಶದ ಎಲ್ಲ ಕುಟುಂಬಗಳವರಿಗೆ ಪರಿಹಾರ ಪ್ಯಾಕೇಜ್‌ ಪೂರ್ಣವಾಗಿ ನೀಡಿದ ನಂತರವೇ ತೆರವು ಮಾಡಿಸಬೇಕು ಎಂದು ತಾಲ್ಲೂಕಿನ ಬೊಗಸೆ ಗ್ರಾಮದ ಗುರುಪರದೇಶಪ್ಪನವರ ಮಠದ ಅರಣ್ಯ ಸಂತ್ರಸ್ತರ ಹಿತರಕ್ಷಣಾ ಸಮಿತಿಯವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರು ಕಡವಂತಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡರು. ಘೋಷಣೆ ಕೂಗಿದರು.

ಭದ್ರಾ ಹುಲಿ ಸಂರಕ್ಷಣೆ ಯೋಜನೆಗೆ ಜಾಗ ಸ್ವಾಧೀನ ಪ್ರಕ್ರಿಯೆ ನಡೆಸಿ, ಈವರೆಗೆ ಪುನರ್ವಸತಿ ಕಲ್ಪಿಸಿಲ್ಲ. ಭದ್ರಾ ವನ್ಯಜೀವಿ ವಿಭಾಗ, ವಲಯ ಅರಣ್ಯಾಧಿಕಾರಿ, ಸಿಬ್ಬಂದಿ ಪೊಲೀಸ್‌ ಭದ್ರತೆಯಲ್ಲಿ ಆ. 4ರಂದು ತೆರವು ಕಾರ್ಯಾಚರಣೆಗೆ ಮುಂದಾದರು. ಕೆಲವು ಕಾಫಿ ಗಿಡಗಳನ್ನು ಕತ್ತರಿಸಿದರು. ತೆರವು ಕಾರ್ಯಚರಣೆಗೆ ಆಕ್ಷೇಪಿಸಿ ಕೆಲ ಸಂತ್ರಸ್ತರು ವಿಷ ಸೇವನೆಗೆ ಯತ್ನಿಸಿದಾಗ ಕಾರ್ಯಚರಣೆ ಕೈಬಿಟ್ಟರು. ಪರಿಹಾರ ನೀಡದೆ ಒಕ್ಕಲೆಬಿಸುವ ಕಾರ್ಯಕ್ಕೆ ಕೈಹಾಕಿ ಅನಾಹುತಗಳು ನಡೆದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಸ್ಥಳಕ್ಕೆ ಧಾವಿಸಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪರಿಹಾರ ನೀಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.

ಗುರುಪರದೇಶಪ್ಪನವರ ಮಠದ ಅರಣ್ಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವಿರೂಪಾಕ್ಷಯ್ಯ, ಖ್ಯಾಂಡ್ಯ ಹಿತರಕ್ಷಣಾ ಸಮಿತಿಯ ಸಂಚಾಲಕ ಚಂದ್ರಶೇಖರ್‌ ರೈ, ಕಡವಂತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ರಸೂಲ್ ಖಾನ್‌, ಬೆಳಸೆ ರತ್ನಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT