ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಯಿಂದ ಲಂಚ ಪಡೆಯುತ್ತಿದ್ದ ಪ್ರಾಚಾರ್ಯ, ಎಫ್‍ಡಿಎ ಲೋಕಾಯುಕ್ತ ಬಲೆಗೆ

Published : 25 ಸೆಪ್ಟೆಂಬರ್ 2024, 12:41 IST
Last Updated : 25 ಸೆಪ್ಟೆಂಬರ್ 2024, 12:41 IST
ಫಾಲೋ ಮಾಡಿ
Comments

ಬೀರೂರು (ಚಿಕ್ಕಮಗಳೂರು): ಹಾಜರಾತಿ ನೀಡಲು ವಿದ್ಯಾರ್ಥಿಯಿಂದ ಲಂಚ ಪಡೆಯುತ್ತಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಂ.ಕೆ.ಪ್ರವೀಣ್ ಕುಮಾರ್‌ ಮತ್ತು ಎಫ್‍ಡಿಎ ಸದಾಶಿವಯ್ಯರನ್ನು ಬುಧವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಅಂತಿಮ ವರ್ಷದ ಬಿಎಸ್‍ಸಿ ವಿದ್ಯಾರ್ಥಿಯೊಬ್ಬರು ಪರೀಕ್ಷೆಗೆ ಕುಳಿತುಕೊಳ್ಳಲು ಹಾಜರಾತಿ ಕೊರತೆ ಇತ್ತು. 

ಹಾಜರಾತಿ ಕೊರತೆ ಸರಿದೂಗಿಸಲು ಪ್ರಾಚಾರ್ಯರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ವಿದ್ಯಾರ್ಥಿಯು ಅತಿಥಿ ಉಪನ್ಯಾಸಕ ಬಿ.ಟಿ.ಹರೀಶ್ ಅವರ ಗಮನಕ್ಕೆ ತಂದಿದ್ದರು. ಹಾಜರಾತಿ ನೀಡುವ ಸಲುವಾಗಿ ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ₹10 ಸಾವಿರ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು. ಪ್ರಾಚಾರ್ಯ ಎಂ.ಕೆ.ಪ್ರವೀಣ್ ಕುಮಾರ್ ₹5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಅತಿಥಿ ಉಪನ್ಯಾಸಕ ಬಿ.ಟಿ.ಹರೀಶ್‌ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಪ್ರಾಚಾರ್ಯರ ಕಚೇರಿಯಲ್ಲಿ ಹಣ ನೀಡುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ತಿರುಮಲೇಶ್, ಇನ್‌ಸ್ಪೆಕ್ಟರ್‌ಗಳಾದ ಮಲ್ಲಿಕಾರ್ಜುನ, ಅನಿಲ್ ರಾಥೋಡ್, ಸಿಬ್ಬಂದಿ ವಿಜಯ ಭಾಸ್ಕರ್, ಲೋಕೇಶ್, ಸವಿನಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT