ನರಸಿಂಹರಾಜಪುರ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹಲವು ದಿನಗಳಿಂದ ಒಂಟಿ ಸಲಗದ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ.

ಭದ್ರಾಹಿನ್ನೀರು ಸಮೀಪದ ಲಿಂಗಾಪುರದ ಗ್ರಾಮದ ಸುರೇಶ್ ಮತ್ತು ಸತೀಶ್ ಎಂಬುವರ ತೋಟಕ್ಕೆ ಅಳವಡಿಸಿದ್ದ ಗೇಟನ್ನು ಮುರಿದು ಒಳನುಗ್ಗಿದ ಒಂಟಿ ಸಲಗ ಬಾಳೆಗಿಡಗಳನ್ನು, ಹಲಸಿನ ಹಣ್ಣುಗಳನ್ನು ತಿಂದು ಹೋಗಿದೆ. ಸಮೀಪದ ಭದ್ರಾ ಹಿನ್ನೀರು ಕಡಿಮೆಯಾಗಿರುವ ಪ್ರದೇಶದಲ್ಲಿ 22 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆ ಹಿಂಡಿಗಿಂತಲೂ ಒಂಟಿ ಸಲಗ ಬಹಳ ಉಪಟಳ ನೀಡುತ್ತಿದ್ದು, ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-126-1021360470

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.