ಮೂಡಿಗೆರೆ: ಸಾರ್ವಜನಿಕ ಸೇವೆ ಜೀವನದ ಗುರಿಯಾಗಬೇಕು ಎಂದು ರೋಟರಿ ರಾಜ್ಯಪಾಲ ಸಿ.ಎ. ದೇವಾನಂದ್ ಅಭಿಪ್ರಾಯಪಟ್ಟರು.

ಪಟ್ಟಣದ ಜೇಸಿಐ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನಿಷ್ಯನಿಗೆ ಸಂಪತ್ತಿನ ಕ್ರೋಢೀಕರಣದಲ್ಲಿ ತೃಪ್ತಿ ಎಂಬುದು ಸಿಗುವುದಿಲ್ಲ. ಸಾರ್ವಜನಿಕ ಸೇವೆಯಿಂದ ಮಾತ್ರ ಸಂಪೂರ್ಣ ತೃಪ್ತಿ ಕಾಣಲು ಸಾಧ್ಯವಾಗುತ್ತದೆ. ಸಂಘ–ಸಂಸ್ಥೆಗಳೊಂದಿಗೆ ಸುಲಭವಾಗಿ ಸಾರ್ವಜನಿಕ ಸೇವೆ ಕೈಗೊಳ್ಳಬಹುದು’ ಎಂದರು.

ರೋಟರಿ ಅಧ್ಯಕ್ಷ ನರೇಂದ್ರಶೆಟ್ಟಿ ಮಾತನಾಡಿ, ‘ಪ್ಲಾಸ್ಟಿಕ್ ಸಕಲ ಜೀವರಾಶಿಗಳಿಗೂ ಹಾನಿಕಾರಕವಾಗಿದ್ದು, ಪ್ಲಾಸ್ಟಿಕ್ನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ’ ಎಂದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ರಸ್ತೆಗಳಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಲಾಯಿತು. ಥ್ರೋಬಾಲ್ನಲ್ಲಿ ಸಾಧನೆ ಮಾಡಿದ ಗೋಣಿಬೀಡಿನ ಹೊಸಪುರ ಗ್ರಾಮದ ಸುಪ್ರಿತಾ ಕೆ.ಎಸ್. ಹಾಗೂ ನಿವೃತ್ತ ಸೈನಿಕ ಸುರೇಂದ್ರ, ಶಿಕ್ಷಕಿ ವೀಣಾ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಯಿತು. ಅನಾರೋಗ್ಯಕ್ಕೆ ಒಳಗಾಗಿರುವ ಮಗುವಿಗೆ ಸಂಸ್ಥೆ ವತಿಯಿಂದ ಧನಸಹಾಯ ಮಾಡಲಾಯಿತು.

ಸಂಸ್ಥೆಯ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ನವೀನ್ ಕುಮಾರ್, ಪ್ರದೀಪ್ ಕುಮಾರ್ ದುಂಡುಗ, ವಿನೋದ್ ಕುಮಾರ್, ನವೀನ್ ಕಳಮೆ, ಬೆಟ್ಟಗೆರೆ ದಿನೇಶ್, ದೀಪಕ್ ದೊಡ್ಡಯ್ಯ, ಯತೀಶ್, ಕೆ.ಎಸ್.ಎಲ್. ತೇಜಸ್ವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.