ಕಡೂರು: ತಾಲ್ಲೂಕಿನ ಮರಡೀಹಳ್ಳಿ ವೀರಾಂಜನೇಯ ಸ್ವಾಮಿ ನೂತನ ದೇವಾಲಯ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನಡೆಯಿತು.

ಭೂಮಿಪೂಜೆ ಅಂಗವಾಗಿ ಭಾನುವಾರ ಕಲಶ ಸ್ಥಾಪನೆ ವಾಸ್ತುಪೂಜೆ ನೆರವೇರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಅನುಜ್ಞೆ, ವಿಶ್ವಕ್ಸೇನಾರಾಧನೆ, ಶುದ್ಧಿ ಪುಣ್ಯಾಹ, ಕರ್ಷಣ (ಭೂಮಿ ಉಳುಮೆ), ಬೀಜಾವಾಪನ, ಪ್ರಥ ಮೇಷ್ಟಕಾ ಪೂಜೆಗಳನ್ನು ಕೆಎಸ್ಒಯು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ವಿದ್ವಾನ್ ಶೆಲ್ವಪಿಳ್ಳೆ ಅಯ್ಯಂಗಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಹುಲ್ಲೇಹಳ್ಳಿ ಅಹೋಬಲ ಲಕ್ಷ್ಮಿನರಸಿಂಹ ಸ್ವಾಮಿ, ಜಿಗಣೇಹಳ್ಳಿ ಮೈಲಾರಲಿಂಗೇಶ್ವರ, ರಂಗನಾಥ ಸ್ವಾಮಿ, ಸೋಮೇಶ್ವರ ಸ್ವಾಮಿ, ಬಳ್ಳೇಕೆರೆ ಆಂಜನೇಯ ಸ್ವಾಮಿ, ಅಂತರಘಟ್ಟಮ್ಮ, ದೊಡ್ಡಪಟ್ಟಣಗೆರೆಯ ದೊಡ್ಡಮ್ಮ- ಚಿಕ್ಕಮ್ಮ, ಜೋಡಿತಿಮ್ಮಾಪುರ ಬಸವೇಶ್ವರ ಸ್ವಾಮಿ ಸೇರಿ 30ಕ್ಕೂ ಹೆಚ್ಚು ದೇವತೆಗಳ ಉಪಸ್ಥಿತಿಯಲ್ಲಿ ಭೂಮಿಪೂಜೆ, ಶಿಲಾಸ್ಥಾಪನೆ, ಶಂಕುಸ್ಥಾಪನೆ ಬಳಿಕ ನೂರೊಂದು ಎಡೆ ಸೇವೆ ನೆರವೇರಿಸಲಾಯಿತು.

ಭೂಮಿಪೂಜೆಗೆ ಉಳುಮೆ ನಡೆಸಿದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬೆಳ್ಳಿಪ್ರಕಾಶ್ ಮಾತನಾಡಿ, ಗ್ರಾಮಸ್ಥರ, ಭಕ್ತರ ಸಹಕಾರದಲ್ಲಿ ದೇವಾಲಯ ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ಆಶಿಸಿದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ, ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಭಂಡಾರಿ ಶ್ರೀನಿವಾಸ್, ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜ್, ತೆಲುಗುಗೌಡ ಸಂಘದ ಅಧ್ಯಕ್ಷ ತಿಮ್ಮರಾಯಪ್ಪ, ಕುರುಬಗೆರೆ ಲೋಕೇಶ್, ಮಂಜಪ್ಪ, ರಮೇಶ್, ಹರೀಶ್, ಆನಂದ, ಮಹೇಶ್, ರಾಜಪ್ಪ, ಭೀಮಾಚಾರ್, ಅಂಜನಕುಮಾರ್, ಎಂ.ಟಿ.ಹನುಮಂತಪ್ಪ,ದಿನೇಶ್, ಹನುಮಂತಪ್ಪ, ಎಂ.ಎನ್.ರಾಜಪ್ಪ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-1295114655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.