ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸೆಮಣೆಯಲ್ಲಿ ಮುಖಗವಸು:ವಧು–ವರ ಕೊರೊನಾ ಜಾಗೃತಿ

Last Updated 5 ಏಪ್ರಿಲ್ 2020, 11:17 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿ ದೊಡ್ಡಿನಕೊಪ್ಪದಲ್ಲಿ ಭಾನುವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ ವಧು–ವರರು ಮುಖಗವಸು ಧರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸಿದರು.

ಸ್ಥಳೀಯ ಚರ್ಚ್ ಹಾಲ್‍ನಲ್ಲಿ ನಿಶ್ಚಿತಾ ಹಾಗೂ ಸುಶಾಂತ್ ಅವರ ವಿವಾಹ ನಿಗದಿಯಾಗಿತ್ತು. ಇದೀಗ ಲಾಕ್‌ಡೌನ್‌ ಇರುವುದರಿಂದ ವಧುವಿನ ಮನೆಯಲ್ಲೇ ಸರಳವಾಗಿ ವಿವಾಹ ಸಂಪ್ರದಾಯ ನಡೆಯಿತು. ಹಸೆಮಣೆಯಲ್ಲಿ ವಧು–ವರ ಮುಖಗವಸು ಧರಿಸಿ, ಇತರರಿಗೂ ಮಾದರಿಯಾದರು. ಬೆರಳೆಣಿಕೆಯಷ್ಟೇ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಅವರಲ್ಲಿಯೂ ಕೆಲವರು ಮುಖಗವಸು, ಟವೆಲ್‌ ಕಟ್ಟಿರುವುದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT