‘ಸಮೂಹ ರಾಜಕಾರಣ ವೇದಿಕೆ ಕಟ್ಟುವ ಗುರಿ’ 

7

‘ಸಮೂಹ ರಾಜಕಾರಣ ವೇದಿಕೆ ಕಟ್ಟುವ ಗುರಿ’ 

Published:
Updated:
Deccan Herald

ಚಿಕ್ಕಮಗಳೂರು: ಜನತಾ ಪ್ರಣಾಳಿಕೆ, ಆಂದೋಲನಗಳ ಮೂಲಕ ಸಮೂಹ ರಾಜಕೀಯ ವೇದಿಕೆ (ಮಾಸ್‌ ಪೊಲಿಟಿಕಲ್‌ ಪ್ಲಾಟ್‌ಫಾರಂ) ಹುಟ್ಟುಹಾಕಿ ಜನತಾ ಪರ್ಯಾಯ ಕಟ್ಟುವುದು ಸಿಪಿಐಎಂಎಲ್‌ -ರೆಡ್‌ ಸ್ಟಾರ್‌ ಧ್ಯೇಯ ಎಂದು ಸಿಪಿಐಎಂಎಲ್‌ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಮಚಂದ್ರನ್‌ ಇಲ್ಲಿ ಸೋಮವಾರ ತಿಳಿಸಿದರು.

ನಗರದಲ್ಲಿ ಸಿಪಿಐಎಂಎಲ್‌ ರಾಜ್ಯ 9ನೇ ಸಮ್ಮೇಳನ ನಡೆದಿದೆ. ನವೆಂಬರ್‌ 27ರಿಂದ ಡಿಸೆಂಬರ್‌ 1 ರವರೆಗೆ ಬೆಂಗಳೂರಿನಲ್ಲಿ ಮಹಾಧಿವೇಶನ ನಡೆಯಲಿದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುವರು. ಬಿಜೆಪಿ ಸೋಲಿಸುವುದು, ಫ್ಯಾಸಿಸಂ ಧೋರಣೆ ಕಿತ್ತೊಗೆಯುವುದು, ಸುಸ್ಥಿರ ಅಭಿವೃದ್ಧಿ ಸಾಧಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಯತತ್ಪರಾಗಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಗತ್ತಿನಲ್ಲಿ ಫ್ಯಾಸಿಸ್ಟ್‌ ಶಕ್ತಿ ಅಧಿಪತ್ಯ ಸ್ಥಾಪಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಕೋಮುವಾದ, ಜಾತಿವಾದ ಬಳಸಿ ಜನರನ್ನು ವಿಭಜಿಸಲಾಗುತ್ತಿದೆ. ರಾಷ್ಟ್ರವು ಸಂದಿಗ್ಧ ಸ್ಥಿತಿಯಲ್ಲಿದೆ’ ಎಂದು ಹೇಳಿದರು

‘ಕಾಂಗ್ರೆಸ್‌ ಸರ್ಕಾರವು 1992ರಲ್ಲಿ ಅನುಷ್ಟಾನಗೊಳಿಸಿದ ನವಉದಾರ ನೀತಿ, ಆರ್ಥಿಕ ನೀತಿಗಳೇ ಮುಂದುವರಿದಿವೆ. ಬಿಜೆಪಿ, ಎಡಪಕ್ಷಗಳು ಅದನ್ನೇ ಒಲೈಸಿ, ಅನುಸರಿಸುತ್ತಿವೆ. ಪರಿಣಾಮವಾಗಿ ಎಲ್ಲ ಕ್ಷೇತ್ರಗಳು ಸಂಕಷ್ಟಗಳನ್ನು ಎದುರಿಸುತ್ತಿವೆ. ಕಾಂಗ್ರೆಸ್‌, ಬಿಜೆಪಿ, ಎಡಪಕ್ಷಗಳಿಗೆ ಸಿಪಿಐಎಂಎಲ್‌ ಸಾಥ್‌ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಸಿಪಿಐಎಂಎಲ್‌ ಸುಮಾರು 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕರ್ನಾಟಕದಲ್ಲಿ ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು ಮೊದಲಾದ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ’ ಎಂದು ಪ್ರತಿಕ್ರಿಯಿಸಿದರು.

ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !