ಕಡೂರು: ‘ಯಾವುದೇ ದಾರ್ಶನಿಕರು ಜಾತಿ ಆಧಾರಿತ ಚಿಂತಕರಲ್ಲ. ಅವರೆಲ್ಲರೂ ಸಮ ಸಮಾಜವನ್ನು ಮಾತ್ರ ಪ್ರತಿಪಾದಿಸಿದ್ದರು’ ಎಂದು ಕಾರ್ಮಿಕ ಮತ್ತು ಕೌಶಲಾಭಿವೃದ್ಧಿ ಸಚಿವ ಸಂತೋಷ್ ಎಂ.ಲಾಡ್ ಹೇಳಿದರು.

ತಾಲ್ಲೂಕಿನ ಯಗಟಿಯಲ್ಲಿ ತಾಲ್ಲೂಕು ಪ್ರದೇಶ ಕುರುಬರ ಸಂಘ ಶನಿವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕದಾಸರು ಕೀರ್ತನೆಗಳ ಮೂಲಕ ಸಮಾನತೆ ಪ್ರತಿಪಾದಿಸಿ ಶೋಷಿತ ವರ್ಗಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಅದೇ ಮೇಲ್ಪಂಕ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜಿಡಿಪಿ ಹೆಚ್ಚಾಗುತ್ತದೆ ಎಂದು ಹೇಳಿದಾಗ ಟೀಕೆಗಳು ಎದುರಾದವು. ಆದರೆ, ಈಗ ನಮ್ಮ ರಾಜ್ಯ ಜಿಡಿಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ ನಮ್ಮ ಮುಖ್ಯಮಂತ್ರಿ ಎಂಬುದರಲ್ಲಿ ಸಂಶಯವಿಲ್ಲ’ ಎಂದರು.

‘ಸರ್ವ ಸಮುದಾಯಗಳನ್ನು ಸಮಾನತೆಯಿಂದ ಕಂಡು ಶೋಷಿತ ವರ್ಗಗಳ ಬಗ್ಗೆ ಚಿಂತನೆ ಮಾಡಿ, ಅವರಿಗೆ ಕಾರ್ಯಕ್ರಮಗಳನ್ನು ಕೊಟ್ಟ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಎಲ್ಲರೂ ಖಂಡಿಸಬೇಕು. ಭಿನ್ನಾಭಿಪ್ರಾಯ ಮರೆತು ಸಂಘಟಿತಗೊಂಡು ಇತರ ಸಮುದಾಯಗಳ ಜತೆ ಸೌಹಾರ್ದದಿಂದ ಬೆರೆತು ಸಮಸಮಾಜದ ಕನಸು ಕಂಡ ಕನಕದಾಸರ ಕನಸನ್ನು ನನಸು ಮಾಡಬೇಕು. ಕಡೂರಿನ ಅಭಿವೃದ್ಧಿಗೆ ಶಾಸಕ ಆನಂದ್ ಜೊತೆ ನನ್ನ ಸಹಭಾಗಿತ್ವವೂ ಸದಾ ಇರುತ್ತದೆ’ ಎಂದರು.

ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಾಸಕ ಕೆ.ಎಸ್.ಆನಂದ್, ‘ದಾಸ ಶ್ರೇಷ್ಠರು, ಬಸವಣ್ಣ, ಅಂಬೇಡ್ಕರ್ ಮುಂತಾದ ಮಹಾನ್ ದಾರ್ಶನಿಕರು ಜಾತಿಗೆ ಸೀಮಿತವಲ್ಲ. ಅವರ ತತ್ವಾದರ್ಶಗಳು ಎಲ್ಲರಿಗೂ ಆದರ್ಶವಾಗಬೇಕು. ಸಮಾಜದವರು ಕನಕ ಸಮುದಾಯ ಭವನ ನಿರ್ಮಿಸುವ ಚಿಂತನೆಯಲ್ಲಿದ್ದು, ಅದಕ್ಕಾಗಿ ₹50 ಲಕ್ಷ ಅನುದಾನ ನೀಡುತ್ತೇನೆ. ಕನಕದಾಸರ ಆದರ್ಶದಲ್ಲೇ ನಾನೂ ಮುಂದುವರಿಯುತ್ತೇನೆ’ ಎಂದರು.

ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಭಗೀರಥ ಉಪ್ಪಾರ ಗುರು ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯರದಕೆರೆ ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದೇಶ ಕುರುಬ ಸಮಾಜದ ರಾಜ್ಯ ಪರಿಷತ್ ಸದಸ್ಯ ಎಚ್.ಸಿ.ಲೋಕೇಶ್ ಉಪನ್ಯಾಸ ನೀಡಿದರು. ಸ್ವಾಗತ ಸಮಿತಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.

ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಜಿ.ಎಚ್.ಶ್ರೀನಿವಾಸ್, ಟಿ.ಡಿ.ರಾಜೇಗೌಡ, ಕುರುಬ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್.ಭೋಗಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಯಗಟಿ ಗೋವಿಂದಪ್ಪ, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡರಾದ ದಾನಿ ಉಮೇಶ್, ಕೆ.ಎಂಮೋಹನ್ ಕುಮಾರ್, ಕಂಸಾಗರ ಸೋಮಶೇಖರ್, ಶರತ್ ಕೃಷ್ಣಮೂರ್ತಿ, ಸವಿತಾ ರಮೇಶ್, ಚಲನಚಿತ್ರ ನಟರಾದ ಎಂ.ಎನ್.ಸುರೇಶ್, ರೇಖಾ ದಾಸ್ ಇದ್ದರು. ಶಿಕ್ಷಕ ಬ್ಯಾಗಡೇಹಳ್ಳಿ ಬಸವರಾಜು ಕನಕದಾಸರ ವೇಷ ಧರಿಸಿ ಗಮನ ಸೆಳೆದರು.

ಕನಕದಾಸರ ಚಿಂತನೆ ಇಂದಿಗೂ ಪ್ರಸ್ತುತ

ನಟ ಸಾಧುಕೋಕಿಲ ಮಾತನಾಡಿ ‘ಶರಣರು ದಾಸರು ಸ್ವಾಮಿಗಳು ಇಲ್ಲದಿದ್ದರೆ ದೇವರು ಎಂಬ ಕಲ್ಪನೆಯೇ ನಮಗಿರುತ್ತಿರಲಿಲ್ಲ. ಸಂಸಾರದ ಜಂಜಾಟದಲ್ಲೇ ಮುಳುಗಿ ದೇವರು–ಅಧ್ಯಾತ್ಮದ ಬಗ್ಗೆ ಚಿಂತನೆ ಮಾಡಲು ಸಮಯ ನೀಡದ ನಮಗೆ ಆ ಚಿಂತನೆ ಮೂಡಿಸುವವರು ದಾಸ ಶ್ರೇಷ್ಠರು. ಅದನ್ನೇ ಕನಕದಾಸರು ಮಾಡಿದರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದ ಅವರು ತತ್ವಪದಗಳನ್ನು ಹಾಡಿ’ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.