ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

622 ಅಂಕ ಪಡೆದ ಬೆಲ್ಲದ ವ್ಯಾಪಾರಿ ಮಗಳು

Last Updated 9 ಮೇ 2018, 9:43 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಎಸ್‌.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಎಂ.ಪಿ.ಪ್ರಕಾಶ್‌ ಪ್ರೌಢಶಾಲೆಯ ಬಿ.ಇ. ತನು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ದ್ವಿತೀಯ, ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕನ್ನಡದಲ್ಲಿ 125, ಹಿಂದಿ, ಗಣಿತ ಹಾಗೂ ಸಮಾಜ ವಿಜ್ಞಾನ ತಲಾ 100, ಇಂಗ್ಲಿಷ್‌ 99, ವಿಜ್ಞಾನ 98 ಅಂಕ ಪಡೆಯುವ ಮೂಲಕ ಬಡ ಕುಟುಂಬದ ವಿದ್ಯಾರ್ಥಿಗಳ ಸಾಧನೆಗೆ ಮಾದರಿಯಾಗಿದ್ದಾಳೆ.

ತನು ಪಟ್ಟಣದ ಈಶ್ವರ ದೇವಸ್ಥಾನ ಬಡಾವಣೆ ನಿವಾಸಿ, ಬೆಲ್ಲದ ವ್ಯಾಪಾರಿ ಬಿ.ಏಕಾಂತಪ್ಪ – ಎಸ್‌.ಸುನೀತಾ  ಅವರ ಪುತ್ರಿ.

ಟ್ಯೂಷನ್‌ಗೆ ಹೋಗಿಲ್ಲ: ‘ನನ್ನ ಮಗಳು ಟ್ಯೂಷನ್‌ ಕ್ಲಾಸಿಗೆ ಹೋಗಿಲ್ಲ. ಮನೆಯಲ್ಲಿಯೇ ಇದ್ದುಕೊಂಡು ಮನೆ ಕೆಲಸ ಮಾಡಿಕೊಂಡು ಓದುತ್ತಿದ್ದಳು. ಅವಳು ಕೇವಲ ಅವರ ಶಾಲೆಯ ಶಿಕ್ಷಕರ ಪಾಠ ಕೇಳಿ, ಅತ್ಯುತ್ತಮ ಅಂಕ ಗಳಿಸಿರುವುದು ಸಂತಸವನ್ನುಂಟು ಮಾಡಿದೆ’ ಎನ್ನುತ್ತಾರೆ ತಾಯಿ ಎಸ್‌.ಸುನೀತಾ.

‘ವೇಳಾಪಟ್ಟಿ ಅಗತ್ಯ’

‘ಅಂದಿನ ಪಾಠ ಅಂದೇ ಓದುತ್ತಿದ್ದೆ. ಪರೀಕ್ಷೆ ಸಿದ್ಧತೆಗೆ ನನ್ನದೇ ವೇಳಾಪಟ್ಟಿ ತಯಾರಿಸಿಕೊಂಡು ಸತತ ಅಭ್ಯಾಸ ಮಾಡಿದೆನು. ಏನೇ ಅರ್ಥವಾಗದಿದ್ದರೂ ನಮ್ಮ ಶಿಕ್ಷಕರಿಗೆ ಪೋನ್‌ ಮಾಡಿ ತಿಳಿದುಕೊಳ್ಳುತ್ತಿದ್ದೆ. ನನ್ನ ಕಲಿಕೆಯ ಪ್ರಗತಿಗೆ ಸ್ನೇಹಿತರಂತೆ ಸಹಕರಿಸಿದ ನನ್ನ ಶಿಕ್ಷಕರನ್ನು ಮರೆಯಲಾರೆ. ಉತ್ತಮ ಕಲಿಕೆಗೆ ನಮ್ಮ ಶಾಲೆಯ ವಾತಾವರಣ ಹಾಗೂ ಆಡಳಿತ ಮಂಡಳಿ ಸಹಕಾರವೂ ನನಗೆ ಸಿಕ್ಕಿತ್ತು. ಮುಂದೆ ಪಿಯು ವಿಜ್ಞಾನ ವಿಭಾಗದಲ್ಲಿ ಓದಬೇಕು ಎಂದುಕೊಂಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT