ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಹೊಸಕ್ಕಿ ಹಬ್ಬದ ಸಂಭ್ರಮ

ಚರ್ಚ್‌ಗಳಲ್ಲಿ ಮೇರಿ ಮಾತೆಯ ಆರಾಧನೆ 8ರಂದು, ಭೋಜನದ ಸವಿ
Last Updated 6 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಸೆಪ್ಟೆಂಬರ್ ಬಂತೆಂದರೆ ಕ್ರೈಸ್ತರಿಗೆ ಮೇರಿ ಮಾತೆಯ ಹೊಸಕ್ಕಿ ಹಬ್ಬದ ಸಂಭ್ರಮ. ಮಾತೆ ಮರಿಯಮ್ಮನ ಜಯಂತಿಯನ್ನು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ‘ಹೊಸಕ್ಕಿ ಹಬ್ಬ’. ಕೊಂಕಣಿಯಲ್ಲಿ ‘ಮೊಂತಿ ಸಾಯ್ಬಿಣಿಚೆಂ ಫೆಸ್ತ್’ ಹಾಗೂ ತುಳುವಿನಲ್ಲಿ ಕುರಲ್‌ ಪರ್ಬ ಎನ್ನುತ್ತಾರೆ.

ಈ ಹಬ್ಬಕ್ಕಾಗಿ ಆಗಸ್ಟ್ ಕೊನೆಯಲ್ಲಿ ನವದಿನಗಳ ನೊವೆನಾ ಪ್ರಾರ್ಥನೆ ಚರ್ಚ್‌ಗಳಲ್ಲಿ ಪ್ರಾರಂಭವಾಗುತ್ತದೆ. ಈ ನೊವೆನಾ ಪ್ರಾರ್ಥನೆಯಲ್ಲಿ ಮಾತೆ ಮರಿಯಮ್ಮನವರನ್ನು ಗೌರವಿಸಿ, ಅವರಿಗೆ ವಿವಿಧ ಹೂಗಳನ್ನು ಅರ್ಪಿಸುವುದು ವಿಶೇಷ.

ಎಲ್ಲರೂ ಒಂದುಗೂಡಿ ಮಾತೆಗೆ ಸ್ತುತಿಸಿ ಗೌರವ ನೀಡುವ ನೊವೆನಾ ಪ್ರಾರ್ಥನೆ ಭಕ್ತಿಯ ಸಂಕೇತ. ಈ ಹಬ್ಬವನ್ನು ಪ್ರತಿ ವರ್ಷವೂ ಸೆಪ್ಟೆಂಬರ್ 8ರಂದು ಆಚರಿಸಲಾಗುತ್ತದೆ. ನೊವೆನಾ ಸಂದರ್ಭದಲ್ಲಿ ಹೂ ತಂದವರಿಗೆ ಕಬ್ಬು ಮತ್ತು ಸಿಹಿ ವಿತರಿಸುವ ಪದ್ಧತಿಯು ಮಲೆನಾಡು ಹಾಗೂ ಕರಾವಳಿ ಭಾಗದ ಚರ್ಚ್‌ಗಳಲ್ಲಿ ರೂಢಿಯಲ್ಲಿದೆ.

ಹೊಸಕ್ಕಿ ತೆನೆ: ಕರಾವಳಿ ಭಾಗದಲ್ಲಿ ಭತ್ತದ ಮೊದಲ ತೆನೆ ಸೆಪ್ಟೆಂಬರ್ ಮಾಸದಲ್ಲಿ ಬರುವುದರಿಂದ ಈ ಜಿಲ್ಲೆಯ ನಂಟಿರುವವರು ಭತ್ತದ ತೆನೆಗಳನ್ನು ಮಲೆನಾಡಿಗೂ ತಂದು ಹೊಸಕ್ಕಿ ಊಟ ಮಾಡುತ್ತಾರೆ. ಈ ಹೊಸಕ್ಕಿಯನ್ನು ಪುಡಿ ಮಾಡಿ, ಪಾಯಸ ಮಾಡಿ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಸೇವಿಸುತ್ತಾರೆ. ಅಂದು ಸಸ್ಯಾಹಾರಿ ಭೋಜನ ಮಾಡುತ್ತಾರೆ. ಈ ಹಬ್ಬವು ಕುಟುಂಬದ ಏಕತೆಯ ಸೂಚಕವೂ ಹೌದು. ಹಬ್ಬದಲ್ಲಿ ಹಲವು ಬಗೆಯ ತರಕಾರಿ ಸಾಂಬಾರು, ವಿವಿಧ ತಿಂಡಿಗಳು ಇರುತ್ತವೆ.

ಮಾತೆ ಮರಿಯಮ್ಮನವರು ಬಾಲಯೇಸು ಅವರ ತಾಯಿಯಾಗಿ, ಜಗನ್ಮಾತೆಯಾಗಿ ಕುಟುಂಬವನ್ನು ಒಗ್ಗೂಡಿಸಿ ನಡೆಸುವ ಈ ಹೊಸಕ್ಕಿ ಹಬ್ಬ (ಕುರಲ್ ಪರ್ಬ) ಸಮಾಜದ ಪಾಲಿಗೆ ಹೊಸತನ ಮೂಡಿಸುವಲ್ಲಿ ಸರ್ವರಿಗೂ ಪ್ರೇರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT