ಮೂಡಿಗೆರೆ: ‘ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವೇ ಗೌರವಿಸುವ ವ್ಯಕ್ತಿ’ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಪಂಚವಟಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಯಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ಸಮಸಮಾಜದ ಕನಸು ಕಂಡವರು. ಭಾರತವನ್ನು ಭವಿಷ್ಯದಲ್ಲಿ ವಿಶ್ವಗುರುವಾಗಿಸುವುದು ಅವರ ಧ್ಯೇಯವಾಗಿತ್ತು. ಈ ಕಾರಣದಿಂದ ವಿಶ್ವ ಉತ್ಕೃಷ್ಟ ಗ್ರಂಥ ಸಂವಿಧಾನವನ್ನು ಭಾರತೀಯರಿಗೆ ನೀಡಿದರು. ನಡೆ–ನುಡಿ, ಶಿಸ್ತು, ಶುಚಿತ್ವ ಎಲ್ಲವು ಅಂಬೇಡ್ಕರ್ ಪಾಲಿಸಿದ ಜೀವನದ ಸತ್ಯಗಳಾಗಿದ್ದವು. ಇದನ್ನೆ ಪ್ರಧಾನಿ ನರೇಂದ್ರ ಮೋದಿ ಪಾಲಿಸಿಕೊಂಡು ಬರುತ್ತಿದ್ದಾರೆ. ಅವರ ವಿಚಾರಧಾರೆಯನ್ನು ಯುವಪೀಳಿಗೆಗೆ ತಿಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ’ ಎಂದರು.

ಬಿಜೆಪಿ ಮುಖಂಡ ಸಿದ್ದಯ್ಯ, ‘ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರನ್ನು ಮಂತ್ರಿಯಾಗಲು ಕಾಂಗ್ರೆಸ್ ಬಿಡಲಿಲ್ಲ. ಅವರ ಹೆಸರನ್ನು ಅಳಿಸುವ ಕೆಲಸ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಆದರೆ, ಬಿಜೆಪಿ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿತು’ ಎಂದರು.

ಬಿಜೆಪಿ ಪದಾಧಿಕಾರಿಗಳಾದ ಹಳೆಕೋಟೆ ಮನೋಜ್, ಪ್ರಶಾಂತ್ ಬಿಳುಗುಳ, ಧನಿಕ್, ನಯನ ತಳವಾರ, ಪರೀಕ್ಷಿತ್ ಜಾವಳಿ, ಸಚಿನ್ ಬಾನಳ್ಳಿ, ಕಾಮಾಕ್ಷಿ, ಸುಂದರೇಶ್ ಕೊಣಗೆರೆ, ರವಿಒಡೆಯರ್, ಸಂದೀಪ್ ಕೆಲ್ಲೂರು, ಭರತ್, ಸುಜಿತ್, ಪ್ರಶಾಂತ್, ಶಿವಣ್ಣ, ರತನ್ ದೇವರುಂದ, ತಾರೇಶ್, ಸಂಜೀವ್ ಪ್ರಸಾದ್, ಪ್ರಕಾಶ್, ರಘು, ಶರತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-753224399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.