ಮೂಡಿಗೆರೆ: ಬಿದರಹಳ್ಳಿ ಗ್ರಾಮದಲ್ಲಿರುವ ಸೈಯದ್ ಫಯಾಜ್ ಅಲಿಶಾ ಖಾದ್ರಿ ದರ್ಗಾದಲ್ಲಿ ಏ. 28ರಂದು ಉರುಸ್ ನಡೆಯಲಿದೆ ಎಂದು ದರ್ಗಾ ಸಮಿತಿಯ ಅಧ್ಯಕ್ಷ ಅಬ್ರಾರ್ ಅಹಮದ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 27ರಂದು ರಾತ್ರಿ 8ಕ್ಕೆ ದರ್ಗಾ ಆವರಣದಲ್ಲಿ ಝಿಕ್ರ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದ್ದು, 28ರಂದು ಸಂಜೆ 4ಕ್ಕೆ ಸಂದಲ್ ಮೆರವಣಿಗೆ, ರಾತ್ರಿ 7ಕ್ಕೆ ದರ್ಗಾಕ್ಕೆ ಚಾದರ ಅರ್ಪಣೆ, ಸಂದಲ್, ದುವಾ, ಸಲಾಂ ಕಾರ್ಯಕ್ರಮ ಜರುಗಲಿದೆ.

ರಾತ್ರಿ 9ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಧಾರ್ಮಿಕ ವಿದ್ವಾಂಸರಾದ ಮುಫ್ತಿ ಮುಹಮ್ಮದ್ ಅಝರ್ ಉದ್ದೀನ್ ಸಾಹೇಬ್, ಮುಹಮ್ಮದ್ ಮುಖೀಸ್ ರಝಾ, ಮಂಗಳೂರಿನ ಕಾಳಕಟ್ಟೆ ಹಜರತ್ ಮಹಮ್ಮದ್ ಫಾಝಿಲ್ ರಜ್ವಿ, ಹಾಸನದ ಹಫೀಝ್ ಖಾರಿ ನಾಸೀರ್ ಹುಸೇನ್ ಸೇರಿದಂತೆ ಅನೇಕ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ. ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು, ಮೈಸೂರು, ಬೆಂಗಳೂರು ಸಹಿತ ವಿವಿಧ ಜಿಲ್ಲೆಗಳ ಭಕ್ತರು ದರ್ಗಾದಲ್ಲಿ ನಡೆಯುವ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿದರಹಳ್ಳಿ ಸೈಯದ್ ಫಯಾಜ್ ಅಲಿಶಾ ಖಾದ್ರಿ ದರ್ಗಾದ ಆಡಳಿತ ಸಮಿತಿ ಪದಾಧಿಕಾರಿಗಳಾದ ಮಝರ್ ಆಸಿಫ್, ಅಬ್ದುಲ್ ಸತ್ತಾರ್, ಅಬ್ದುಲ್ ಮಜೀದ್, ಲೀಯಾಕತ್ ಆಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-126-372820191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.