ಮೂಡಿಗೆರೆ: ಜಾತಿ–ಮತಗಳಿಗಿಂತ ದೇಶ ಮೊದಲೆಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ ಹಾಗೆ ಅವರ ತತ್ವವನ್ನೇ ಬಿಜೆಪಿ ಅಳವಡಿಸಿಕೊಂಡು ಪಾಲಿಸುತ್ತಿದೆ ಎಂದು ಕೊಳ್ಳೆಗಾಲ ಮಾಜಿ ಶಾಸಕ ಎನ್. ಮಹೇಶ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಹದಲ್ಲಿ ಉಸಿರಿರೋವರೆಗೆ ಈ ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಜಾತಿ–ಮತವನ್ನು ದೇಶಕ್ಕಿಂತ ಮೇಲಿಡುವ ಕೆಲಸ ಮಾಡಿದರೆ ಸ್ವಾತಂತ್ರ ಮತ್ತೊಮ್ಮೆ ಕಳೆದುಕೊಳ್ಳುವ ಸ್ಥಿತಿ ಬರುತ್ತದೆ. ಹಾಗಾಗಿ ಈ ಘಟನಾವಳಿ ಸಂಭವಿಸದಂತೆ ಎಲ್ಲರೂ ಸಮಾನತೆ ಹಾದಿಯಲ್ಲಿ ನಡೆಯಬೇಕಿದೆ’ ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯಕ್ರಿಯೆ ನಡೆಸಲು ಜಾಗ ಕೊಡದವರು ಈಗ ಸಂವಿಧಾನ ಉಳಿಸಿ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳವನ್ನು ಪುಣ್ಯ ಭೂಮಿ ಎಂದು ಘೋಷಿಸಿತು. ಅಲ್ಲದೇ ಅವರ ಮನೆ ಹಾಗೂ ಶಿಕ್ಷಣ ಪಡೆದ ಪಂಚ ಸ್ಥಳಗಳನ್ನು ಪಂಚತೀರ್ಥವನ್ನಾಗಿ ಮಾಡಿ, ಮುಂದಿನ ಜನಾಂಗ ಶಾಶ್ವತವಾಗಿ ನೆನೆಪಿಟ್ಟುಕೊಳ್ಳುವ ಕಾರ್ಯವನ್ನು ಮೋದಿಯವರು ಮಾಡಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನಾವು ಇಂದಿನಿಂದಲೇ ಅಂಬೇಡ್ಕರ್ ಒಂದು ಜಾತಿಯ ನಾಯಕನಲ್ಲ. ಅವರು ರಾಷ್ಟ್ರ ಪುರುಷ ಎಂಬುದನ್ನು ಅರಿತು ಅವರ ಆಶಯ ಪಾಲಿಸಬೇಕು. ನಾವು ಅಸ್ಪೃಶ್ಯತೆಗೆ ಅವಕಾಶ ಕೊಡದೇ ಜಾತಿ ಎಂಬ ಪಿಡುಗನ್ನು ತೊಲಗಿಸಿದಾಗ ಮಾತ್ರ ಅಂಬೇಡ್ಕರ್ ಆಶಯಕ್ಕೆ ಬೆಲೆ ಸಿಗುತ್ತದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿದರು. ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಸಚಿನ್ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಮುಖಂಡರಾದ ಹಳಸೆ ಶಿವಣ್ಣ, ದಿನೇಶ್ ದೇವವೃಂದ, ಜೆ.ಎಸ್. ರಘು, ದೀಪಕ್ ದೊಡ್ಡಯ್ಯ, ಕಲ್ಲೇಶ್ ಮಾಕೋನಹಳ್ಳಿ, ಮನೋಜ್ ಹಳೆಕೋಟೆ, ಎಂ.ಆರ್. ಜಗದಿಶ್, ಕೆ.ಸಿ. ರತನ್, ಭರತ್ ಬಾಳೂರು, ಪಂಚಾಕ್ಷರಿ, ರವಿ ಆಲ್ದೂರು, ವೆಂಕಟೇಶ್ ಕುರುವಂಗಿ, ಎಂ.ಎಸ್. ಸುಜಿತ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-126-591074008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.