ಮೂಡಿಗೆರೆ: ‘ಪಕ್ಷವನ್ನು ಕಟ್ಟಿ ದೇಶಕ್ಕಾಗಿ ದುಡಿದ ನಾಯಕರನ್ನು ಪ್ರತಿನಿತ್ಯ ಸ್ಮರಿಸಬೇಕು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಂ. ಗಜೇಂದ್ರ ಕೊಟ್ಟಿಗೆಹಾರ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘1980ರಲ್ಲಿ ಸ್ಥಾಪನೆಯಾದ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಪಕ್ಷಕ್ಕಾಗಿ ಅನೇಕ ಮಹನೀಯರು ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರಂತಹ ನಾಯಕರ ಸೇವೆ ಮರೆಯುವಂತಿಲ್ಲ’ ಎಂದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ‘ಪ್ರತಿಯೊಬ್ಬರೂ ದೇಶ ಸೇವೆ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ರಾಜಕಾರಣಕ್ಕೆ ನಮ್ಮನ್ನು ಅರ್ಪಿಸಿಕೊಳ್ಳಬೇಕು. ಪಕ್ಷದ ಮೂಲ ತತ್ವಗಳಾದ ರಾಷ್ಟ್ರಭಕ್ತಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಿದ್ಧಾಂತದ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸೋಣ’ ಎಂದರು.

ಬಿಜೆಪಿ ಮುಖಂಡರಾದ ಭರತ್ ಬಾಳೂರು, ವಿನಯ್ ಹಳೆಕೋಟೆ, ಪಂಚಾಕ್ಷರಿ, ಲೋಕೇಶ್ ಮರ್ಕಲ್, ಪರೀಕ್ಷಿತ್ ಜಾವಳಿ, ಸುಂದ್ರೇಶ್ ಕೊಣಗೆರೆ, ಪ್ರವಿಣ್ ಮಗ್ಗಲಮಕ್ಕಿ, ಭರತ್, ಮಂಜುಪಟೇಲ್, ರಂಗನಾಥ್, ಸುನಿಲ್, ಕಲ್ಲೇಶ್ ಬಾಳೂರು, ಸಂದೇಶ್ ಗುತ್ತಿ, ರಾಮೇಗೌಡ, ಸಂದೀಪ್ ಕೆಲ್ಲೂರು, ಆದರ್ಶ ಕನ್ನಳ್ಳಿ, ಪ್ರಕಾಶ್ ಕಿರುಗುಂದ, ಸಚಿನ್ ಬಾನಳ್ಳಿ, ಅಂಭಾವತಿ, ರತೀಶ್ ಕೂಡಳ್ಳಿ, ಸುನಿಲ್ ಮಣ್ಣಿಕೆರೆ ಮತ್ತಿತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-126-398415913

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.