ಮೂಡಿಗೆರೆ: ‘ಸಹಕಾರ ಸಂಘಗಳು ಗ್ರಾಮೀಣ ಅಭಿವೃದ್ಧಿಯ ಬೆನ್ನೆಲುಬಾಗಿದ್ದು, ರೈತರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.

ತಾಲ್ಲೂಕಿನ ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಕಟ್ಟಡ ಹಾಗೂ ಮೊದಲ ಅಂತಸ್ತಿನ ಸಭಾಂಗಣ ಕಾಮಗಾರಿಗೆ ಶಂಕು ಸ್ಥಾಪನೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.

‘ಹಿಂದೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೆಚ್ಚಾಗಿ ಹಿರಿಯರು ನಿರ್ದೇಶಕರಾಗುತ್ತಿದ್ದರು. ಈಗ ಯುವಕರು ಅಧಿಕ ಸಂಖ್ಯೆಯಲ್ಲಿ ನಿರ್ದೇಶಕರಾಗುತ್ತಿರುವುದು ಉತ್ತಮ ಬೆಳವಣಿಗೆ. ಅವರೆಲ್ಲರೂ ರೈತರ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸಬೇಕು’ ಎಂದರು.

ಗುದ್ದಲಿಪೂಜೆ ನೆರವೇರಿಸಿದ ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ‘ಸಹಕಾರ ಸಂಘದ ಮೂಲಕ ರೈತರಿಗೆ ಗುಣಮಟ್ಟದ ಗೊಬ್ಬರ ಒದಗಿಸಬೇಕು. ಸಾಲ ನೀಡುವ ಜತೆಗೆ ಸಾಲ ವಸೂಲಾತಿಯನ್ನು ಅಚ್ಚುಕಟ್ಟಾಗಿ ನಡೆಸಿದರೆ ಸಂಘವನ್ನು ಅಭಿವೃದ್ಧಿಯತ್ತ ಒಯ್ಯಲು ಸಾಧ್ಯ’ ಎಂದು ಹೇಳಿದರು.

ಹಂತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉತ್ತಮ್ಕುಮಾರ್, ಉಪಾಧ್ಯಕ್ಷ ಕೆ.ಎನ್. ಮಿಥುನ್, ನಿರ್ದೇಶಕರಾದ ವಿನೋದ್ ಕಣಚೂರು, ಆದರ್ಶ ಕನ್ನಹಳ್ಳಿ, ನಯನ್ ಕಣಚೂರು, ಪ್ರಸನ್ನ ಅಂಗಡಿ, ರತನ್ ದೇವವೃಂದ, ಶ್ರೀನಿವಾಸ್ ಉಗ್ಗೇಹಳ್ಳಿ, ನೇಪಾ ಆದಿತ್ಯ ಹಂತೂರು, ಶೋಭಾ ಕಣಚೂರು, ರಮೇಶ್ ಪಟೇಲ್ ದೇವವೃಂದ, ನಾಗೇಶ್ಗೌಡ ಜೇನುಬೈಲ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-2071933773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.