ಮೂಡಿಗೆರೆ: ‘ಪ್ರತಿ ಎಕರೆಗೆ ಜಮೀನಿಗೆ 3 ಚೀಲ ಗೊಬ್ಬರದ ಅವಶ್ಯಕತೆ ಇದ್ದರೂ ಕೃಷಿ ಇಲಾಖೆ ನಿಯಮದಂತೆ 1 ಚೀಲ ಮಾತ್ರ ಯೂರಿಯಾ ಗೊಬ್ಬರವನ್ನು ಖರೀದಿಸಬೇಕಾಗಿದೆ. ಗೊಬ್ಬರ ಖರೀದಿಯಲ್ಲೂ ಕೃಷಿ ಇಲಾಖೆ ಮೂಗು ತೂರಿಸುತ್ತಿರುವುದು ಸರಿಯಲ್ಲ’ ಎಂದು ಲೋಕವಳ್ಳಿ ಗ್ರಾಮದ ಕೃಷಿಕ ಎಲ್.ಬಿ. ರಮೇಶ್ ದೂರಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ವಿವಿಧ ಕಡೆ ಯೂರಿಯಾ ಮಾರಾಟ ಕೇಂದ್ರಗಳಿವೆ. ಅಂತಹ ಕೇಂದ್ರಗಳ ಗೋದಾಮಿನ ತುಂಬಾ ಯೂರಿಯಾ ಶೇಖರಿಸಿಟ್ಟಿರುವುದರಿಂದ ಇತರೆ ಗೊಬ್ಬರ ದಾಸ್ತಾನು ಇಡಲು ಜಾಗವಿಲ್ಲದಂತಾಗಿದೆ. ರೈತರ ಆಧಾರ್ ಹಾಗೂ ಪಹಣಿ ನೀಡಿ ಒಂದು ಎಕರೆ ಜಮೀನಿಗೆ ಒಂದು ಚೀಲ ಮಾತ್ರ ಯೂರಿಯಾ ಖರೀದಿಸಬೇಕಾಗಿದೆ. ಒಂದು ಎಕರೆ ಕಾಫಿ ತೋಟ ಅಥವಾ ಭತ್ತದ ಗದ್ದೆಗೆ ಕನಿಷ್ಠ 3 ಚೀಲ ಯೂರಿಯಾ ಗೊಬ್ಬರದ ಅವಶ್ಯಕತೆಯಿದ್ದರೂ ಕೃಷಿ ಇಲಾಖೆಯ ನಿಯಮಾವಳಿಯಂತೆ ಗೊಬ್ಬರ ಮಾರಾಟಗಾರರು ಒಂದು ಚೀಲ ಮಾತ್ರ ನೀಡುತ್ತಿದ್ದಾರೆ. ಇನ್ನೊಂದು ಚೀಲ ಬೇಕಾದರೆ ಮುಂದಿನ ತಿಂಗಳಲ್ಲಿ ಬನ್ನಿ ಎಂದು ಹೇಳುತ್ತಾರೆ ಇದು ಸರಿಯಲ್ಲ. ರೈತರ ಜಮೀನಿಗೆ ಬೇಕಾದಷ್ಟು ಗೊಬ್ಬರವನ್ನು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ, ಕೃಷಿ ಇಲಾಖೆಯಿಂದ ಯೂರಿಯಾ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡುತ್ತಿಲ್ಲ. ಹಣಕೊಟ್ಟು ಖರೀದಿಸುವಾಗ ರೈತರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಆರಂಭವಾದ ಕೂಡಲೆ ಕಾಫಿ ತೋಟಕ್ಕೆ ಯೂರಿಯಾ ಹಾಕಬೇಕಾಗಿದೆ. ಮಳೆಯಾದಾಗ ಒಂದು ಚೀಲ ಮಾತ್ರ ಯೂರಿಯಾ ಗೊಬ್ಬರ ಹಾಕಿ ಮುಂದಿನ ತಿಂಗಳು ಮತ್ತೊಮ್ಮೆ ತೋಟದ ಜಾಗಕ್ಕೆ ಗೊಬ್ಬರ ಹಾಕಲು ಸಾಧ್ಯವಿಲ್ಲ. ರಸಗೊಬ್ಬರ ಮಾರಾಟ ಕೇಂದ್ರಗಳ ಗೋದಾಮಿನಲ್ಲಿ ಯೂರಿಯಾ ಗೊಬ್ಬರಕ್ಕೆ ಬರವಿಲ್ಲ. ದಾಸ್ತಾನು ಹೆಚ್ಚಾಗಿರುವುದರಿಂದ ಎಲ್ಲಾ ರೈತರಿಗೆ ಪ್ರತೀ ಎಕರೆ ಜಮೀನಿಗೆ ಕನಿಷ್ಠ 3 ಚೀಲ ಯೂರಿಯಾ ಮಾರಾಟ ಮಾಡಬೇಕು. ಕೃಷಿ ಇಲಾಖೆಯ ನಿಯಮದಂತೆ ಒಂದು ಎಕರೆ ಜಮೀನಿಗೆ ಒಂದು ಚೀಲ ಗೊಬ್ಬರವನ್ನು ಮಾತ್ರ ನೀಡಿದರೆ, ರೈತರ ಫಸಲು ಸಂಪೂರ್ಣ ನೆಲ ಕಚ್ಚುವ ಆತಂಕವಿದೆ. ಹಾಗಾಗಿ ಕೃಷಿ ಇಲಾಖೆಯ ನಿಯಮಾವಳಿಯನ್ನು ಕೊಡಲೇ ಸರ್ಕಾರ ಬದಲಿಸಿ ರೈತರಿಗೆ ಅಗತ್ಯವಿರುವ ಪ್ರಮಾಣದಷ್ಟು ಗೊಬ್ಬರ ಖರೀದಿಸಲು ಅವಕಾಶ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-126-1618328975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.