ಮೂಡಿಗೆರೆ: ಪಟ್ಟಣದ ಕೊಲ್ಲಿಬೈಲ್ ಗ್ರಾಮದ ಕೆ.ಎಂ. ರಸ್ತೆಯ ಸಿದ್ದಾರ್ಥವನದ ಬಳಿ ಗುರುವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಮರವನ್ನು ವಶಕ್ಕೆ ಪಡೆದಿದ್ದಾರೆ.

8 ಗಂಟೆಗೆ ಮೂಡಿಗೆರೆಯಿಂದ ಚಿಕ್ಕಮಗಳೂರಿನ ಕಡೆಗೆ ಹಲಸಿನ ಮರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ರಾತ್ರಿ 8 ಗಂಟೆಯಿಂದಲೂ ಸಿದ್ದಾರ್ಥವನದ ಬಳಿ ನಾಕಾಬಂದಿ ಇರಿಸಿ ವಾಹನಗಳ ತಪಾಸಣೆ ನಡೆಸಿದ್ದು, ಈ ವೇಳೆ ಹೆದ್ದಾರಿಯಲ್ಲಿ ಬಂದ KA-46-6177 ಸಂಖ್ಯೆಯ ಬೊಲೆರೋ ಪಿಕಪ್ ವಾಹನವನ್ನು ತಪಾಸಣೆ ಮಾಡಿದಾಗ ಪರವಾನಗಿ ಇಲ್ಲದೇ 45 ಹಲಸಿನ ಸೈಜುಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

ಕೂಡಲೇ ಆರೋಪಿಗಳಾದ ಹಳೇ ಮೂಡಿಗೆರೆಯ ಶಿವಪ್ಪ ಹಾಗೂ ಗುತ್ತಿಯ ವಿಕ್ರಂ ಎಂಬುವರನ್ನು ವಶಕ್ಕೆ ಪಡೆದು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಡಿಸಿಎಫ್ ರಮೇಶ್ ಬಾಬು ಹಾಗೂ ಎಸಿಎಫ್ ಆಕರ್ಷ್ ಅವರ ಮಾರ್ಗದರ್ಶನದಲ್ಲಿ, ನಡೆದ ಕಾರ್ಯಾಚರಣೆಯಲ್ಲಿ ಆರ್ಎಫ್ಒ ಮಂಜುನಾಥ್ ಜಿ. ನೇತೃತ್ವ ವಹಿಸಿದ್ದರು. ಡಿಆರ್ಎಫ್ಒ ಅಶ್ವತ್ಥ್ ಬಗಲಿ, ಬೀಟ್ ಫಾರೆಸ್ಟರ್ಗಳಾದ ಪರಮೇಶ್, ಸುರೇಶ್, ವಾಚರ್ ಉದಯ್ ಹಾಗೂ ವಾಹನ ಚಾಲಕರಾದ ಸುಮಂತ್, ನವರಾಜ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-126-1040537743

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.