ಮೂಡಿಗೆರೆ: ‘ಮಲೆನಾಡಿನ ಭೂಗಳ್ಳರೆಲ್ಲರೂ ಒಟ್ಟಿಗೆ ಸೇರಿ ಸರ್ಕಾರವನ್ನು ಬ್ಲ್ಯಾಕ್ಮೇಲ್ ಮಾಡಲು ಪಟ್ಟಣದಲ್ಲಿ ರೈತರ ಹೆಸರಿನಲ್ಲಿ ಸಮಾವೇಶ ನಡೆಸಿದ್ದಾರೆ. ಇಂತಹ ಸಮಾವೇಶದ ತಂತ್ರಕ್ಕೆ ಸರ್ಕಾರ ಮಣಿಯದೆ ಬಡ ವರ್ಗದ ಕುಟುಂಬಗಳಿಗೆ ನಿವೇಶನ ಒದಗಿಸಬೇಕು’ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕ ಯು.ಬಿ. ಮಂಜಯ್ಯ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ನೂರಾರು ಎಕರೆ ಜಮೀನು ಹೊಂದಿರುವ ಶ್ರೀಮಂತರೂ ಸರ್ಕಾರಿ ಜಾಗವನ್ನು ಕಬಳಿಸುವ ಸಲುವಾಗಿ ಮಧ್ಯವರ್ತಿಗಳ ಮೂಲಕ ಫಾರಂ 53ರಲ್ಲಿ ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಬಹುತೇಕ ಶ್ರೀಮಂತ ಭೂ ಮಾಲೀಕರಿಗೆ ಅಧಿಕಾರಿಗಳು ಸಾಗುವಳಿ ಚೀಟಿ ನೀಡಿ ಬಡವರನ್ನು ವಂಚಿಸಿದ್ದಾರೆ. ಭೂಗಳ್ಳರು ಸಲ್ಲಿಸಿದ್ದ ಫಾರಂ 53ರ ಅರ್ಜಿಯನ್ನು ಪರಿಶೀಲಿಸಿದಾಗ, 50ರಿಂದ 500 ಎಕರೆವರೆಗೆ ಜಮೀನು ಹೊಂದಿರು ವವರು ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಕಂಡು ಬಂದಿದೆ. ಅಂತಹ ಅರ್ಜಿಗಳನ್ನು ಕಳೆದ ವರ್ಷ ಸರ್ಕಾರ ವಜಾ ಮಾಡಿದೆ. ಇದರಿಂದ ವಿಚಲಿತರಾದವರು ಸಮಾವೇಶ ನಡೆಸಿ, ಸರ್ಕಾರವನ್ನು ಬ್ಲ್ಯಾಕ್ಮೇಲ್ ಮಾಡಲು ಹೊರಟಿದ್ದಾರೆ. ಭೂಗಳ್ಳರ ಸಮಾವೇಶಕ್ಕೆ ಸಚಿವರು, ಸಂಸದರು, ಶಾಸಕರು ಹೋಗಿಲ್ಲ. ಅದೊಂದು ಅನಧಿಕೃತ ಸಮಾವೇಶ ಎಂಬುದು ಸಾಬೀತಾಗಿದೆ’ ಎಂದರು.

‘ಬಹುತೇಕ ಸ್ಮಶಾನ, ಸರ್ಕಾರಿ ಕೆರೆ, ಸರ್ಕಾರಿ ರಸ್ತೆ, ಗೋಮಾಳ ಜಾಗ, ಕಂದಾಯ ಇಲಾಖೆಯ ಜಾಗ, ಗ್ರಾಮ ಠಾಣೆ ಜಾಗ, ಅರಣ್ಯ ಭೂಮಿ ಇವೆಲ್ಲವನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡು ಸಾಗುವಳಿ ಚೀಟಿಗಾಗಿ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸಿ, ಅಧಿಕಾರಿಗಳಿಗೆ ಆಮಿಷವೊಡ್ಡಿ ಸಾರ್ವಜನಿಕ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಅಂತಹ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-126-1558333244

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.