ಮೂಡಿಗೆರೆ: ‘ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಣಿಕೆರೆ ಗ್ರಾಮದಲ್ಲಿ ಭೂಮಿಯಿದ್ದರೂ, ನಿವೇಶನ ನೀಡದೇ ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಎಂಎಲ್) ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಆರೋಪಿಸಿದರು.

ಗೋಣಿಬೀಡು ಗ್ರಾಮದ ಮಣ್ಣಿಕೆರೆಯಲ್ಲಿ ಶುಕ್ರವಾರ ನಿವೇಶನ ರಹಿತರು ಟಿಯುಸಿಐ ಹಾಗೂ ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಕೈಗೊಂಡ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಣ್ಣಿಕೆರೆ ಗ್ರಾಮದ ಸರ್ವೆ ನಂ. 144ರಲ್ಲಿ 3.20 ಎಕರೆ ಸರ್ಕಾರಿ ಭೂಮಿಯನ್ನು 10 ವರ್ಷಗಳ ಹಿಂದೆ ನಿವೇಶನಕ್ಕೆ ಕಾಯ್ದಿರಿಸಲಾಗಿತ್ತು. ನಿವೇಶನ ಹಂಚಿಕೆ ಮಾಡುವಂತೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ತಾಲ್ಲೂಕು ಆಡಳಿತ ಯಾವುದೇ ಕ್ರಮ ವಹಿಸಿಲ್ಲ. ಈ ಜಾಗದಲ್ಲಿ ಈಗಾಗಲೇ ಒರ್ವ ವ್ಯಕ್ತಿ ಮನೆ ನಿರ್ಮಿಸಿದ್ದು, ಅದನ್ನು ಕೂಡ ತೆರವುಗೊಳಿಸಿಲ್ಲ. ಆದ್ದರಿಂದ ಇಲ್ಲಿಯೇ ಗುಡಿಸಲು ನಿರ್ಮಿಸಿ ವಾಸ್ತವ್ಯ ಹೂಡಲು ನಿರ್ಧರಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಹಗಲು– ರಾತ್ರಿ ಹೋರಾಟ ಮಾಡಲಾಗುವುದು ಎಂದರು.

ಟಿಯುಸಿಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ. ಕೃಷ್ಣಪ್ಪ ಮಾತನಾಡಿ, ‘ಜನಪ್ರತಿನಿಧಿಗಳು ಸ್ವಾರ್ಥಕ್ಕಾಗಿ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದುದರಿಂದ ತಾಲ್ಲೂಕಿನಲ್ಲಿ ಕಂದಾಯ ಭೂಮಿ, ಗೋಮಾಳ, ಗೈರಾಣಿ ಗೋಮಾಳ, ಕೆರೆ ಅಂಗಳ, ಹುಲ್ಲು ಬನ ಸೇರಿದಂತೆ ಎಲ್ಲಾ ಭೂಮಿ ಉಳ್ಳವರ ಪಾಲಾಗಿದ್ದು, ನಿವೇಶನಕ್ಕೆ ಜಾಗ ಸಿಗದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಿವೇಶನ ರಹಿತರ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೀಪ್, ಗೋಣಿಬೀಡು ಹೋಬಳಿ ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ರಾಜೇಶ್, ಉಮೇಶ್, ಸುರೇಶ್, ಗೋಪಾಲ್, ಕೃಷ್ಣ, ಜಾನಕಿ, ಯಶೋದಾ ಇದ್ದರು.

‘ಪ್ರಜಾವಾಣಿ’ಯ ಮೇ 25ರ ಸಂಚಿಕೆಯಲ್ಲಿ ಪ್ರಕಟಗೊಂಡ ಜಿಲ್ಲೆಯಲ್ಲಿ 36,785 ಎಕರೆ ಅರಣ್ಯ ಪ್ರದೇಶ ಒತ್ತುವರಿ ಸುದ್ದಿಯನ್ನು ಪ್ರತಿಭಟನಾಕಾರರಿಗೆ ಓದಿ ಹೇಳಿದ ಮುಖಂಡರು, ಒತ್ತುವರಿಯಲ್ಲಿ ಶ್ರೀಮಂತರ ಪಾತ್ರವೇ ಪ್ರಮುಖವಾಗಿದ್ದು, ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ಬಡವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳದ ಅಧಿಕಾರಿಗಳು, ಈ ಪ್ರಮಾಣದಲ್ಲಿ ಒತ್ತುವರಿಯಾಗಿದ್ದರೂ ಕೈಕಟ್ಟಿ ಕುಳಿತಿರುವುದು ಹಾಸ್ಯಾಸ್ಪದ. ಒತ್ತುವರಿ ಪ್ರದೇಶ ತೆರವು ಮಾಡಿ ಬಡವರಿಗೆ ಸೂರು ಕಲ್ಪಿಸಬೇಕು’ ಎಂದು ಒತ್ತಾಯಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-126-2112989124

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.