ಮೂಡಿಗೆರೆ: ‘ದೇಶದ ಸಮಗ್ರ ಅಭಿವೃದ್ಧಿಗೆ ಜನಸಂಖ್ಯಾ ದತ್ತಾಂಶ ಪ್ರಮುಖ ಅಂಶವಾಗುತ್ತದೆ’ ಎಂದು ತಹಶೀಲ್ದಾರ್ ಎಸ್. ಅಶ್ವಿನಿ ಹೇಳಿದರು.

ಪಟ್ಟಣದ ಡಿ.ಎಸ್. ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜನಗಣತಿ 2027ರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನಗಣತಿಯು ದೇಶದ ಆರ್ಥಿಕ ಚಟುವಟಿಕೆ, ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬ ಗಣತಿದಾರರಿಗೂ ತಾನು ಗಣತಿ ಕಾರ್ಯದ ಮೂಲಕ ದೇಶದ ಪ್ರಗತಿ ಕಾರ್ಯದಲ್ಲಿ ತೊಡಗಿದ್ದೇನೆ ಎಂಬ ಅಭಿಮಾನವಿರಬೇಕು. ಪ್ರತಿ ಮನೆಯನ್ನು ಸಂಪರ್ಕಿಸಿ ಗಣತಿ ನಡೆಸಬೇಕು. ಈ ಬಾರಿ ಸ್ವಯಂ ಗಣತಿಗೂ ಅವಕಾಶ ಕಲ್ಪಿಸಿದ್ದು, ಸ್ವಯಂ ಗಣತಿ ಮಾಡಿಕೊಳ್ಳುವ ಗಣತಿದಾರರು ಮಾಹಿತಿ ಸಲ್ಲಿಸಿದ ಬಳಿಕ ಸೃಜನೆಯಾಗುವ ಸಂಖ್ಯೆಯನ್ನು ಗಣತಿ ದಾರರಿಗೆ ನೀಡಬೇಕು. ಗಣತಿ ಮಾಹಿತಿಯನ್ನು ಬೇರೆಲ್ಲೂ ಹಂಚಿಕೊಳ್ಳುವುದಿಲ್ಲ.ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಮಾಹಿತಿ ನೀಡಬೇಕು’ ಎಂದರು.

ಶಿಕ್ಷಕರ ಸಂಘದ ಪದಾಧಿಕಾರಿ ಬಿ.ಆರ್. ನವೀನ್ ಮಾತನಾಡಿ, ‘ಮಲೆನಾಡಿನಲ್ಲಿ ಸಾಕು ನಾಯಿಗಳ ಸಮಸ್ಯೆಯನ್ನು ಗಣತಿದಾರರು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಗಣತಿದಾರರೊಂದಿಗೆ ಮಾಹಿತಿ ನೀಡಲು ಸಹಕರಿಸುವಂತೆ ತಾಲ್ಲೂಕು ಆಡಳಿತದಿಂದ ಸಾರ್ವ ಜನಿಕ ರಿಗೆ ಮಾಹಿತಿ ನೀಡಬೇಕು’ ಎಂದರು.

ಶಿಕ್ಷಕರ ಸಂಘದ ಮಂಜಪ್ಪ, ಶಿರಸ್ತೆದಾರ್ ಬಾಬು, ನಿವೃತ್ತ ಶಿಕ್ಷಕ ರಮೇಶ್, ತರಬೇತುದಾರರಾದ ಶಿವರಾಮೇಗೌಡ, ಸುನೀಲ್, ಶಂಕರ್, ಕೃಷ್ಣರಾಜ ಅರಸ್ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-126-1654010571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.