ಮೂಡಿಗೆರೆ: ‘ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವ– ಉದ್ಯೋಗ ನಡೆಸಲು ಯುವಕರಿಗೆ ವಿಪುಲ ಅವಕಾಶಗಳಿಗೆ’ ಎಂದು ಜೆಸಿಐ ತರಬೇತುದಾರ ಶ್ರೇಷ್ಠಿ ಹೇಳಿದರು.

ಪಟ್ಟಣದ ವಿದ್ಯಾ ನಗರದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಜೆಸಿಐ ಮೂಡಿಗೆರೆ ಘಟಕದಿಂದ ಏರ್ಪಡಿಸಿದ್ದ ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸ್ವಯಂ ಉದ್ಯೋಗವು ಸ್ವಾಭಿಮಾನಕ್ಕೆ ದಾರಿ ಮಾಡಿಕೊಡುತ್ತದೆ. ಜಗತ್ತು ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವುದರಿಂದ, ಸ್ವ– ಉದ್ಯೋಗ ಕೈಗೊಳ್ಳಲು ಸೂಕ್ತವಾಗಿದೆ. ಓದಿನ ನಂತರ ಬೇರೆ ಕಂಪನಿಗಳಲ್ಲಿ ಉದ್ಯೋಗಕ್ಕೆ ಅಲೆದಾಡುವುದಕ್ಕಿಂತಲೂ ತಮ್ಮಲ್ಲಿರುವ ಕೌಶಲ ಬಳಸಿಕೊಂಡು ಸ್ವ ಉದ್ದಿಮೆದಾರರಾಗಬೇಕು’ ಎಂದರು.

ಎಂಜಿನಿಯರ್ ನಿರಂಜನ್ ಮಾತನಾಡಿ, ‘ಮೊಬೈಲ್ ಫೋನ್ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಕ್ಕೆ ಅವಕಾಶಗಳಿವೆ. ಟಿವಿ ರಿಪೇರಿ ಸೇರಿದಂತೆ ತಾಂತ್ರಿಕ ಉಪಕರಣಗಳ ರಿಪೇರಿ ಕಲಿತಿದ್ದರೆ, ತಮ್ಮದೇ ಆದ ಉದ್ದಿಮೆ ಸ್ಥಾಪಿಸಬಹುದು. ಉದ್ಯೋಗಿ ಯಾಗಿ ಬದುಕು ರೂಪಿಸಿಕೊಳ್ಳುವುದಕ್ಕಿಂತಲೂ, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಯುವ ಸಮುದಾ ಯವು ತಂತ್ರಜ್ಞಾನಕ್ಕೆ ಪೂರಕವಾದ ಶಿಕ್ಷಣ ಪಡೆಯಬೇಕು’ ಎಂದರು.

ಜೆಸಿಐ ಮೂಡಿಗೆರೆ ಘಟಕದ ಅಧ್ಯಕ್ಷ ಎಂ.ವಿ. ಸುನಿಲ್ ಮಾತನಾಡಿ, ‘ವಿದ್ಯಾರ್ಥಿಗಳು ತರಬೇತಿಯ ಲಾಭ ಪಡೆದು ಸ್ವಯಂ ಉದ್ಯೋಗಿಗಳಾಗಿ ಹಾಗೂ ಉದ್ಯಮ ಸ್ಥಾಪಿಸಿ ಬೇರೆಯವರಿಗೆ ಕೆಲಸ ನೀಡುವ ಮೂಲಕ ದೇಶದ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು’ ಎಂದರು.

ಕಾರ್ಯಾಗಾರದಲ್ಲಿ ಐಟಿಐ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-126-838938906

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.