ಮೂಡಿಗೆರೆ: ಪಟ್ಟಣದ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ತರಕಾರಿ ಅಂಗಡಿಯನ್ನು ತೆರವುಗೊಳಿಸಬಾರದೆಂದು ಒತ್ತಾಯಿಸಿ, ಬುಧವಾರ ಹಳೇಮೂಡಿಗೆರೆ ಹಿತರಕ್ಷಣಾ ಸಮಿತಿ ಮುಖಂಡರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕವಳ್ಳಿ ರಮೇಶ್, ‘ಹೆದ್ದಾರಿ ಬದಿಯಲ್ಲಿ ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುವ ವ್ಯಾಪಾರಿಯನ್ನು ಒಕ್ಕಲೆಬ್ಬಿಸಬಾರದು. ಪಟ್ಟಣದ ನಿವಾಸಿ ಮಹಮ್ಮದ್ ಶಫಿ ಎಂಬುವರು ಹಳೇಮೂಡಿಗೆರೆ ಗ್ರಾಮದ ವಲಿಯಂ ಫರ್ನಾಂಡಿಸ್ ಅವರ ಜಮೀನಿನಲ್ಲಿ ಬಾಡಿಗೆ ಪಡೆದು ತರಕಾರಿ ಹಾಗೂ ಹಣ್ಣಿನ ವ್ಯಾಪಾರ ನಡೆಸುತ್ತಿದ್ದಾರೆ. ಈ ಅಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದು, ರಸ್ತೆಯಿಂದ 40 ಅಡಿಗೂ ಹೆಚ್ಚು ದೂರದಲ್ಲಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿಲ್ಲ. ಆದರೂ ಪ್ರಭಾವಿ ವ್ಯಕ್ತಿಗಳು ಹುನ್ನಾರ ನಡೆಸಿ ಅಂಗಡಿ ತೆರವಿಗೆ ಮುಂದಾಗುತ್ತಿದ್ದು, ಉದ್ದೇಶಪೂರ್ವಕವಾಗಿ ವರ್ತಕರಿಗೆ ಕಿರುಕುಳ ನೀಡಿದರೆ ಹೋರಾಟ ನಡೆಸಲಾಗುವುದು’ ಎಂದರು.

ಜುಬೇರ್ ಮಾತನಾಡಿ, ‘ತರಕಾರಿ ಅಂಗಡಿಯಿಂದ ಯಾರಿಗೂ ಸಮಸ್ಯೆಯಾಗುತ್ತಿಲ್ಲ. ಆದರೂ ಅಂಗಡಿ ತೆರವುಗೊಳಿಸಲು ಮುಂದಾಗಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯು ವಿಸ್ತರಣೆಯಾದರೆ ಅಂಗಡಿ ತೆರವುಗೊಳಿಸುವುದಾಗಿ ತರಕಾರಿ ವ್ಯಾಪಾರಿ ಕರಾರು ಪತ್ರದ ಮೂಲಕ ಒಪ್ಪಿಗೆ ನೀಡಿದ್ದಾರೆ. ಆದರೂ ಗ್ರಾಮ ಪಂಚಾಯಿತಿಯಿಂದ ತರಕಾರಿ ಅಂಗಡಿ ತೆರವುಗೊಳಿಸಲು ನೋಟೀಸ್ ನೀಡಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ತರಕಾರಿ ವ್ಯಾಪಾರ ನಂಬಿ ಜೀವನ ನಡೆಸುತ್ತಿರುವ ಈ ವ್ಯಾಪಾರಿಗೆ ಹೆದ್ದಾರಿ ವಿಸ್ತರಣೆಯಾಗುವವರೆಗೆ ಮಾರಾಟ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಅಂಗಡಿ ತೆರವು ಮಾಡದಂತೆ ಒತ್ತಾಯಿಸಿ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮೀನಾಕ್ಷಿ ಅವರಿಗೆ ಮನವಿ ನೀಡಿದರು. ಈ ವೇಳೆ ಮುಖಂಡರಾದ ಎಲ್.ಬಿ. ರಮೇಶ್, ಎಂ.ಆರ್. ಜಗದಿಶ್, ಝುಬೈರ್, ಜಗದೀಶ್, ನಂಜುಂಡ, ಸತೀಶ್ಗೌಡ, ಜ್ಯೋತಿ, ಸಫಿಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-492768894

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.