ಮೂಡಿಗೆರೆ: ಚೆಕ್ ಬೌನ್ಸ್ ಪ್ರಕರಣದಲ್ಲಿ ನನಗೆ ಮೋಸ ಮಾಡಲಾಗಿದೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಆರೋಪಿಸಿಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನನ್ನ ಒಡನಾಡಿಯಾಗಿದ್ದ ಮಿತ್ರನೋರ್ವ ನನ್ನಿಂದ ಹಣ ಪಡೆಯುವ ದೃಷ್ಟಿಯಿಂದ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ನಾನು ಆಕ್ಸಿಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಆ ಖಾತೆಯಲ್ಲಿ ಯಾವುದೇ ವ್ಯವಹಾರ ಮಾಡುತ್ತಿರಲಿಲ್ಲ. ಸಹಿ ಹಾಕಿದ್ದ 8 ಚೆನ್ ಅನ್ನು ನನಗೆ ತಿಳಿಯದೇ, 2018ರಲ್ಲಿ ಆ ವ್ಯಕ್ತಿ ಒಯ್ದಿದ್ದಾರೆ. ಬಳಿಕ, ಆ ವ್ಯಕ್ತಿಯ ಅಕೌಂಟ್ನಿಂದ ನನಗೆ ಹಣ ಕೊಟ್ಟಂತೆ ಮಾಡಲು ಹಾಗೂ ಸಾಕ್ಷಿ ಹೊಂದಿಸಿಕೊಳ್ಳಲು ನನ್ನ ಖಾತೆಗೆ ₹68 ಲಕ್ಷ ಜಮಾ ಮಾಡಿದ್ದಾರೆ. ನಂತರ, ಅವರ ಬಳಿಯಿದ್ದ ನನ್ನ 8 ಚೆಕ್ನಲ್ಲಿ ಕೆಲವು ಚೆಕ್ ಬಳಸಿಕೊಂಡು ಅವರ ಸಂಬಂಧಿಕರಿಂದ ಹಣ ಡ್ರಾ ಮಾಡಿದ್ದಾರೆ. ನನ್ನಿಂದ ಹಣ ಪಡೆಯಲು ಬಾಕಿ ಚೆಕ್ ಬಳಸಿ, ಚೆಕ್ಬೌನ್ಸ್ ಕೇಸ್ ಹಾಕಿದ್ದಾರೆ’ ಎಂದು ಹೇಳಿದರು.

ಈ ವಿಚಾರ ನನಗೆ ನ್ಯಾಯಾಲಯದಿಂದ ನೊಟೀಸ್ ಬರುವವರೆಗೂ ತಿಳಿದಿರಲಿಲ್ಲ. ನಂತರ ಕಾನೂನು ಹೋರಾಟ ನಡೆಸಲು ಮುಂದಾದೆ. ಇದಕ್ಕೆ ಕಾರಣರಾದ ಆ ವ್ಯಕ್ತಿಯು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರು ಬೇರೆಯವರ ವಿರುದ್ಧವೂ ಅನೇಕ ಚೆಕ್ ಬೌನ್ಸ್ ಪ್ರಕರಣ ಹಾಕಿರುವ ಬಗ್ಗೆ ಮಾಹಿತಿ ದೊರಕಿದೆ. ಮುಖ್ಯವಾಗಿ ನನ್ನ ಖಾತೆಯಿಂದ ₹5 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡುವಾಗ ಬ್ಯಾಂಕ್ನವರು ನನ್ನ ಒಪ್ಪಿಗೆ ಪಡೆಯದೇ ನೀಡಿದ್ದಾರೆ. ಅಲ್ಲದೇ ನನ್ನ ಖಾತೆಯಿಂದ ಹಣ ಪಡೆದವರು ಅವರ ಸಂಬಂಧಿಕರೆಂದು ತಿಳಿದಿರಲಿಲ್ಲ. ಈ ಎಲ್ಲದರ ಬಗ್ಗೆ ಪೊಲೀಸ್ ತನಿಖೆ ನಡೆಸಲು ದೂರು ನೀಡಿದ್ದೇನೆ. ಜತೆಗೆ ನನ್ನ ಖಾತೆಯಿಂದ ಹಣ ಪಡೆದವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.