ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಇಬ್ಭಾಗಕ್ಕೆ ಖಲಿಸ್ತಾನ ಚಳವಳಿಗರ ಸಂಚು: ಶೋಭಾ ಕರಂದ್ಲಾಜೆ

Last Updated 8 ಡಿಸೆಂಬರ್ 2020, 11:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಭಾರತವನ್ನು ಇಬ್ಭಾಗ ಮಾಡಲು, ಖಲಿಸ್ತಾನ ಪ್ರತ್ಯೇಕಿಸಲು ಸಂಚು ನಡೆಯುತ್ತಿದೆ. ಅದಕ್ಕಾಗಿ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಷಡ್ಯಂತ್ರ ದೇಶದ ಹೊರಗಿನಿಂದ ನಡೆಯುತ್ತಿದೆ’ ಎಂದು ಶೋಭಾ ಕರಂದ್ಲಾಜೆ ಇಲ್ಲಿ ಮಂಗಳವಾರ ಆರೋಪಿಸಿದರು.

‘ಸಂಚಿನ ಹಿಂದೆ ಖಲಿಸ್ತಾನ ಚಳಿವಳಿಯಲ್ಲಿ ಸಕ್ರಿಯರಾಗಿದ್ದ ಕಾರ್ಯಕರ್ತರ ಕೈವಾಡ ಇದೆ. ಚಳವಳಿಯಲ್ಲಿದ್ದ ಹಲವರು ಲಂಡನ್‌, ಕೆನಡಾ ಇತರೆಡೆ ಇದ್ದಾರೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.

‘ಶಾಹೀನ್‌ ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ತುಕ್ಡೆ ಗ್ಯಾಂಗ್‌ನವರು, ದೇಶದ್ರೋಹಿಗಳು ಈಗ ಹೋರಾಟದಲ್ಲಿ ಭಾಗವಹಿಸಿದ್ದಾರೆ’ ಎಂದು ದೂರಿದರು.

‘ಸಂಸದರಿಗೆ ಅವಾಗವಾಗ ಒಂದು ‘ವಾಯ್ಸ್‌ ರೆಕಾರ್ಡ್‌’ ಬರುತ್ತದೆ. ಅದರಲ್ಲಿ ‘ನಾವು ಖಲಿಸ್ತಾನ ಚಳವಳಿ ನಾಯಕರು. ದೇಶದ ಎಲ್ಲ ಸಿಖ್ಖರು, ಪೊಲೀಸರು, ಸೈನಿಕರು ಭಾರತದ ವಿರುದ್ಧ ತಿರುಗಿ ಬೀಳಬೇಕು’ ಎಂಬ ಸಂದೇಶ ಇರುತ್ತದೆ. ನನಗೂ ಈ ರೆಕಾರ್ಡ್ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT