ಮೂಡಿಗೆರೆ: ಕೊಟ್ಟಿಗೆಹಾರ ಗ್ರಾಮದಲ್ಲಿ ಶತಮಾನದ ಹಿಂದಿನ ಮಸೀದಿ ಕಟ್ಟಡವನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಹೊಸ ಮಸೀದಿ ಕಟ್ಟಡ ನಿರ್ಮಿಸಿದ್ದು ಜೂನ್ 4, 5ರಂದು ಉದ್ಘಾಟನೆ ನಡೆಯಲಿದೆ.

ಗ್ರಾಮದ ಹೊರನಾಡು ರಸ್ತೆಯಲ್ಲಿ ಚಿಕ್ಕ ಕಟ್ಟಡದಲ್ಲಿ ಮುಸ್ಲಿಂ ಸಮುದಾಯದವರು ಮಸೀದಿ ನಿರ್ಮಿಸಿಕೊಂಡು ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದರು. ಹೊರಗಿನಿಂದ ಬಂದ ಮುಸ್ಲಿಂ ಪ್ರವಾಸಿಗರು ಚಿಕ್ಕ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಕೊಟ್ಟಿಗೆಹಾರದಲ್ಲಿ ಮುಸ್ಲಿಮರು ಕಡಿಮೆಯಿದ್ದರೂ, ಆಕರ್ಷಣೀಯ ಮಸೀದಿಯನ್ನು ನಿರ್ಮಿಸುವ ಆಡಳಿತ ಸಮಿತಿ ಪದಾಧಿಕಾರಿಗಳ ಪ್ರಯತ್ನ ಒಂದೇ ವರ್ಷದಲ್ಲಿ ಫಲ ನೀಡಿದೆ. ಗೋಪುರ ಹಾಗೂ ಮಿನಾರ್ ಅಳವಡಿಸಿಕೊಂಡು ನಿರ್ಮಿಸಿರುವ ಮಸೀದಿ ಕಟ್ಟಡವು ನೋಡುಗರನ್ನು ಆಕರ್ಷಿಸುತ್ತಿದೆ. ಅಲ್ಲದೇ ಮಸೀದಿಯ ಅಕ್ಕ ಪಕ್ಕದಲ್ಲಿಯೇ ಶ್ರೀರಾಮ ದೇವಸ್ಥಾನ ಹಾಗೂ ಚರ್ಚ್ ಕೂಡ ಇದ್ದು, ಧಾರ್ಮಿಕ ಸೌಹಾರ್ದ ಸಾರುವಂತಿದೆ.

ಜೂನ್ 4ರಂದು ನೂತನ ಮಸೀದಿ ಕಟ್ಟಡ ಉದ್ಘಾಟನೆಯಾಗಲಿದ್ದು, ಸಮಸ್ತ ಕೇರಳ ಜಮಾಯತ್ ಉಲಮಾದ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತು ಕೊಯ ತಂಗಳ್, ಮೂಡಿಗೆರೆ ಖಾಝಿ ಪಿ.ಪಿ. ಉಮ್ಮರ್ ಮುಸ್ಲಿಯರ್ ಕೊಯ್ಯೋಡು, ಮಂಗಳೂರಿನ ಧಾರ್ಮಿಕ ವಿದ್ವಾಂಸ ಇರ್ಷಾದ್ ದಾರಿಮಿ ಅಲ್ ಜಝಾರಿ, ಕಕ್ಕಿಂಜೆ ಮಸೀದಿ ಖತೀಬ್ ಅಬೂಬಕ್ಕರ್ ಜಲಾಲಿ, ಚರ್ಚ್ನ ಧರ್ಮಗುರು ಫಾ. ವಿಲಿಯಂ ಬರ್ನಾಡ್, ಚಿಕ್ಕಮಗಳೂರಿನ ವಿಶ್ವ ಧರ್ಮ ಪೀಠದ ಜಯ ಬಸವಾನಂದ ಸ್ವಾಮೀಜಿ, ಸಚಿವ ಯು.ಟಿ. ಖಾದರ್, ಶಾಸಕಿ ನಯನಾ ಮೋಟಮ್ಮ, ಮಂಗಳೂರು ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಶರ್ಪುದ್ದೀನ್, ಕೊಟ್ಟಿಗೆಹಾರ ಮಸೀದಿ ಅಧ್ಯಕ್ಷ ಮುನೀರ್, ಕಟ್ಟಡ ಸಮಿತಿಯ ಅಧ್ಯಕ್ಷ ಹಸನಬ್ಬ ಹಾಗೂ ಇತರೆ ಧರ್ಮಗುರುಗಳು, ಧಾರ್ಮಿಕ ವಿದ್ವಾಂಸರು ಪ್ರವಚನ ನೀಡಲಿದ್ದಾರೆ. ಉದ್ಘಾಟನೆಯಲ್ಲಿ ಸರ್ವಧರ್ಮ ಸೌಹಾರ್ದ ಸಂಗಮ ನಡೆಯಲಿದೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-126-154338563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.