ಮೂಡಿಗೆರೆ: ರಾಜ್ಯ ಸರ್ಕಾರ ನಿಗದಿಪಡಿಸಿರುವ ಕಾರ್ಮಿಕರ ಕನಿಷ್ಠ ವೇತನ ಅವೈಜ್ಞಾನಿಕವಾಗಿದ್ದು, ಇಂದಿನ ಬೆಲೆ ಏರಿಕೆಗೆ ಹೊಂದಿಕೆಯಾಗುವುದಿಲ್ಲ ಎಂದು ಟಿಯುಸಿಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ. ಕೃಷ್ಣಪ್ಪ ದೂರಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 81ಕ್ಕೂ ಅಧಿಕ ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು 10 ವರ್ಷಗಳ ಬಳಿಕ ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶಾಸಕರ ವೇತನವು ಐದು ವರ್ಷಗಳಲ್ಲಿ ಎರಡು ಬಾರಿ (ಶೇ 160ರಷ್ಟು) ಏರಿಕೆಯಾಗಿದೆ. ಆದರೆ, ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರ ವೇತನ ಪರಿಷ್ಕರಣೆ 10 ವರ್ಷಗಳ ಬಳಿಕ ನಡೆದಿದೆ. ಅಕುಶಲ ಕರ್ಮಿಗಳಿಗೆ ₹981 ಕನಿಷ್ಠ ವೇತನ ಜಾರಿಗೊಳಿಸಿರುವುದನ್ನು ಉಲ್ಲೇಖಿಸಿದ ಅವರು, ಕಾರ್ಮಿಕರಿಗೆ ದುಡಿಮೆ ಅವಧಿ, ಹೆಚ್ಚುವರಿ ಕೆಲಸಕ್ಕೆ ದ್ವಿಗುಣ ವೇತನ, ಸಾಮಾಜಿಕ ಭದ್ರತೆ, ಮಹಿಳಾ ಸುರಕ್ಷತೆ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಸೌಲಭ್ಯಗಳು ತಲುಪುವಂತೆ ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಎಲ್ಲಾ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಬೇಕು. ದಿನಗೂಲಿ ಕನಿಷ್ಠ ₹1 ಸಾವಿರ ಹಾಗೂ ಮಾಸಿಕ ಕನಿಷ್ಠ ವೇತನ ₹35 ಸಾವಿರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ದೇಶದ ಭದ್ರತೆ ಹಾಗೂ ನುಸುಳುಕೋರರ ನಿಯಂತ್ರಣದ ಉದ್ದೇಶದಿಂದ ಎಸ್ಐಆರ್ ಜಾರಿಗೆ ಸಿದ್ಧತೆ ನಡೆಸುತ್ತಿದೆ. ಚುನಾವಣಾ ಮ್ಯಾಪಿಂಗ್ ನಡೆಸಿ ಇಲ್ಲಿನ ಕಾರ್ಮಿಕರು, ಆದಿವಾಸಿಗಳು ಬಹುತೇಕ ವಲಸೆ ಕಾರ್ಮಿಕರಲ್ಲಿ ಮತದಾನದ ಹಕ್ಕು ಉಳ್ಳವರು ಮತ್ತು ಮತದಾನದ ಹಕ್ಕು ಇಲ್ಲದವರು ಎಂಬ 2 ವರ್ಗ ಮಾಡುತ್ತಿದೆ. ಒಂದೊಂದೇ ಹಕ್ಕುಗಳನ್ನು ಕಸಿದುಕೊಳ್ಳುತ್ತಾ ನಂತರ ಈ ದೇಶದ ಪ್ರಜೆಗಳೇ ಅಲ್ಲ ಎಂದು ಬಿಂಬಿಸಲಾಗುತ್ತಿದೆ. ಇದನ್ನು ನಮ್ಮ ಕಾರ್ಮಿಕ ಸಂಘಟನೆ ವಿರೋಧಿಸುತ್ತದೆ. ಕರ್ನಾಟಕದಲ್ಲಿ ಎಸ್ಐಆರ್ ಅನುಷ್ಠಾನಗೊಳಿಸುವುದನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-126522478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.