ಮೂಡಿಗೆರೆ: ತಾಲ್ಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಗಾಳಿ–ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿತು.

ಮಧ್ಯಾಹ್ನ 2ಕ್ಕೆ ಪ್ರಾರಂಭವಾದ ಮಳೆಯು ಒಂದು ಗಂಟೆಗೂ ಹೆಚ್ಚು ಕಾಲ ಆರ್ಭಟಿಸಿತು. ಮಧ್ಯಾಹ್ನ 3ರ ವೇಳೆಗೆ ಮಳೆಯು ಇಳಿಮುಖವಾದರೂ ಸಂಜೆಯವರೆಗೂ ತುಂತುರು ಮಳೆಯಾಗುತ್ತಲೇ ಇತ್ತು. ಪಟ್ಟಣ ಸೇರಿದಂತೆ ಬಣಕಲ್, ಹೊರಟ್ಟಿ, ಕೊಟ್ಟಿಗೆಹಾರ, ಹ್ಯಾಂಡ್ ಪೋಸ್ಟ್ ಮುಂತಾದ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದ್ದರಿಂದ ಹಾನಿಯ ಪ್ರಮಾಣವೂ ಅಧಿಕವಾಗಿತ್ತು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಎರಡು ಮರದ ಕೊಂಬೆಗಳು ಗಾಳಿಗೆ ಸಿಲುಕಿ ಮುರಿದು ಬಿದ್ದಿದ್ದರಿಂದ, ಮರದ ಕೆಳಗೆ ನಿಲ್ಲಿಸಿದ್ದ ಬೈಕ್ಗಳು ಹಾನಿಯಾದವು. ಆಲ್ದೂರು ಮಾರ್ಗದ ಫ್ಲಾಟ್ ಫಾರಂ ಬಳಿಯಿರುವ ಬೃಹತ್ ಮರದ ಕೊಂಬೆಯೂ ಮುರಿದಿದೆ.

ಪಟ್ಟಣದ ಪರಿಮಳಮ್ಮ ದೇವಾಲಯದ ಬಳಿ ಮರವು ಕಾರಿನ ಮೇಲೆ ಬಿದ್ದು ನಷ್ಟ ಉಂಟಾಯಿತು, ಅಲ್ಲದೇ ರಸ್ತೆ ಸಂಚಾರವೂ ಸ್ಥಗಿತವಾಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ರಾಷ್ಟ್ರೀಯ ಹೆದ್ದಾರಿ 173ರ ಬಿಳಗುಳದ ಬಳಿ ತೆಂಗಿನ ಮರವೊಂದು ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನೆಯ ವೇಳೆ ಕಾರೊಂದು ಕ್ಷಣಾರ್ಧದಲ್ಲಿ ಮರ ಬೀಳುವ ವೇಳೆ ಅಪಾಯದಿಂದ ಪಾರಾಗಿದೆ. ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೆಂಚುಗಳು ಹಾರಿಹೋಗಿ ಹಾನಿ ಉಂಟಾಗಿದೆ.

ಪಟ್ಟಣದ ಸಂತೆ ಮೈದಾನದಲ್ಲಿ ಗೂಡ್ಸ್ ವಾಹನದ ಮೇಲೆ ಮರದ ಕೊಂಬೆ ಬಿದ್ದು, ವಾಹನ ಜಖಂಗೊಂಡಿದ್ದು, ಗೆಂಡೆಹಳ್ಳಿ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಗಾಳಿಯಿಂದ ಹ್ಯಾಂಡ್ ಪೋಸ್ಟ್, ಗಂಗನಮಕ್ಕಿ, ಹಳ್ಳದಗಂಡಿ ಸೇರಿದಂತೆ ವಿವಿಧೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸಂಜೆಯವರೆಗೂ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಕಾಫಿ, ಕಾಳುಮೆಣಸು, ಶುಂಠಿ ಬೆಳೆಗಳಿಗೆ ಹಾನಿಯಾಯಿತು. ಕಾಫಿ ತೋಟಗಳಲ್ಲಿ ಮರ ಬಿದ್ದು ಹಾನಿಯಾಗಿದ್ದು, ಹಲವೆಡೆ ಅಡಿಕೆ ಮರಗಳು ಸಹ ನೆಲಕಚ್ಚಿ ನಷ್ಟ ಉಂಟಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-126-2139740483

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.