ಬುಧವಾರ, ಏಪ್ರಿಲ್ 1, 2020
19 °C

ಚಿಕ್ಕಮಗಳೂರು: ಕತ್ತು ಸೀಳಿ ಮಹಿಳೆಯ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಲಕ್ಷ್ಮೀಶ ನಗರದ ಮನೆಯಲ್ಲಿ ಕವಿತಾ(31) ಎಂಬವರ ಕತ್ತು ಸೀಳಿ ಕೊಲೆ ಮಾಡಲಾಗಿದೆ.
ರಾತ್ರಿ 7 ರಿಂದ 8 ಗಂಟೆ ಹೊತ್ತಿನಲ್ಲಿ ಕೃತ್ಯ ನಡೆದಿದೆ.

ಕವಿತಾ ಅವರು ದಂತವೈದ್ಯ ರೇವಂತ್ ಅವರ ಪತ್ನಿ. ದಂಪತಿಗೆ ಇಬ್ಬರು ಪತ್ರರು ಇದ್ದಾರೆ.

ದುಷ್ಕರ್ಮಿಗಳು ಕೋಣೆಗೆ ನುಗ್ಗಿ ಕವಿತಾ ಅವರ ಕುತ್ತಿಗೆಗೆ ಇರಿದಿದ್ದಾರೆ. ಕೋಣೆಯಲ್ಲಿ ರಕ್ತ ಸುರಿದಿದೆ. ಕೋಣೆಯ ಬೀರುವಿನಲ್ಲಿದ್ದ ಬೆಲೆಬಾಳುವ  ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೇಶ ದ್ವಾರ, ಹಿಂಬದಿ ಪ್ರದೇಶದ ಸಿಸಿ ಟಿವಿ ಕ್ಯಾಮೆರಾ ಫೂಟೇಜ್ ಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.ದುಷ್ಕರ್ಮಿಗಳ ಪತ್ತೆಗೆ ತಲಾಶ್ ಆರಂಭಿಸಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗಕ್ಕೆ ಒಯ್ಯಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಕಡೂರು ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಶ್ವಾನ ದಳ ಕರೆಸಲಾಗಿದೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು