ಸಿಂಸೆ (ನರಸಿಂಹರಾಜಪುರ): ‘ನಾಗಲಾಪುರ ಮತ್ತು ಶಿರಗಳಲೆ ಗ್ರಾಮ ಅರಣ್ಯ ಸಮಿತಿಯ ಸಮಗ್ರ ಪುನಶ್ಚೇತನ ತರಬೇತಿ ಕಾರ್ಯಾಗಾರ, ಸಮಗ್ರ ನಿರ್ವಹಣಾ ಯೋಜನೆ ಮತ್ತು ಸರ್ವ ಸದಸ್ಯರ ಮಹಾ ಮಂಡಳಿ ಸಭೆಯನ್ನು ಮೇ 7ರಂದು ಆಯೋಜಿಸಲಾಗಿದೆ’ ಎಂದು ನಾಗಲಾಪುರ ಮತ್ತು ಶಿರಗಳಲೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೆ. ರವಿ ಹೇಳಿದರು.

ಸಿಂಸೆ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಮಂಗಳವಾರ ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಾಗಲಾಪುರ ಗ್ರಾಮದ ಮುಂಡೊಳ್ಳಿ ಜನತಾ ಕಾಲೊನಿಯ ಸಮುದಾಯ ಭವನದಲ್ಲಿ ಮೇ 7ರಂದು ಬೆಳಿಗ್ಗೆ 10ಕ್ಕೆ ನಡೆಯುವ ತರಬೇತಿ ಕಾರ್ಯಾಗಾರ ಮತ್ತು ಸರ್ವ ಸದಸ್ಯರ ಸಭೆಗೆ ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಚಾಲನೆ ನೀಡಲಿದ್ದಾರೆ. ಸಮಿತಿಯ ಅಧ್ಯಕ್ಷ ಕೆ. ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಪ್ಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಪ್ರಸಾದ್, ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ. ಆದರ್ಶ್, ಉಪವಲಯ ಅರಣ್ಯಾಧಿಕಾರಿ ಬಿರೇಶ್, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಪದಾಧಿಕಾರಿಗಳು, ರಾಜ್ಯ ಅರಣ್ಯ ಸಮಿತಿ ಒಕ್ಕೂಟಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು ಅರಣ್ಯ ಭವನದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ಮಾತನಾಡಿ, ‘ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮ, ಫಾರೆಸ್ಟ್ ಡೆವಲಪ್ಮೆಂಟ್ ಏಜೆನ್ಸಿ, ಎನ್.ಎ.ಪಿ, ಎಫ್.ಡಿ.ಎ ಯೋಜನೆಯಡಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಗ್ರಾಮ ಅರಣ್ಯ ಸಮಿತಿ ಮೂಲಕ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆಯನ್ನು 20 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ನಿಷ್ಕ್ರಿಯ ಗ್ರಾಮ ಅರಣ್ಯ ಸಮಿತಿಯನ್ನು ಪುನಶ್ಚೇತನ ಮಾಡಿ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತಿದೆ. ಎಲೆ ಮರೆಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಸಾಲು ಮರದ ತಿಮ್ಮಕ್ಕ ಸದ್ಭಾವನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದರು.

ಗ್ರಾಮ ಅರಣ್ಯ ಸಮಿತಿಯ ನಿರ್ದೇಶಕ ಸತೀಶ್ ಮಾತನಾಡಿ, ಸರ್ಕಾರದ ಯೋಜನೆಯಡಿ ರಚನೆಯಾದ ಗ್ರಾಮ ಅರಣ್ಯ ಸಮಿತಿ ಪ್ರಸ್ತುತ ನಿಷ್ಕ್ರಿಯಗೊಂಡಿದೆ. ಅದನ್ನು ಪುನಶ್ಚೇತನ ಮಾಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.

ವಿಶೇಷ ಪೋಷಕ ಸದಸ್ಯ ಎಂ.ಡಿ. ಸಜಿ ಮಾತನಾಡಿದರು. ಕಾರ್ಯಕಾರಿ ಸಮಿತಿಯ ನಿರ್ದೇಶಕರಾದ ಬಲರಾಮ, ಕೆ.ಎಸ್. ಸರ್ವಮಂಗಳ, ಆರ್. ಲತಾ, ಕೆಂಪಣ್ಣ, ಕಾವ್ಯರಂಗಸ್ವಾಮಿ, ಕೆ.ಡಿ. ಜೇಮ್ಸ್, ಎಸ್.ವಿ. ಉಪೇಂದ್ರಗೌಡ, ಕೆ.ಎಸ್. ಅನ್ನಪೂರ್ಣ, ಜೆ. ಮಮತಾ, ಗಸ್ತುಅರಣ್ಯ ಪಾಲಕ ಎಂ.ಡಿ. ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-126-428615962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.