ನರಸಿಂಹರಾಜಪುರ: ಪಟ್ಟಣದ ಮೇದರ ಬೀದಿಯಲ್ಲಿರುವ ಅಂತರಘಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವವು ಏ. 23ರಿಂದ 28ರವರೆಗೆ ನಡೆಯಲಿದೆ.

ಜಾತ್ರೋತ್ಸವದ ಪ್ರಯುಕ್ತ ಏ. 23ರಂದು ಬೆಳಿಗ್ಗೆ 11ಕ್ಕೆ ದೇವಿಗೆ ವಿಶೇಷ ಪೂಜೆ, ಗಣಪತಿ ಹೋಮ, ನವಗ್ರಹ ಪೂಜೆ, ಗಂಗೆ ಪೂಜೆ, ರುದ್ರಾಭಿಷೇಕ, ದುರ್ಗಾ ಹೋಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 8ಕ್ಕೆ ಅಂತರಘಟ್ಟಮ್ಮ ದೇವಿಯನ್ನು ಬಿಡದಿ ಮನೆಗೆ ಬಿಡುವುದು.

24ರಂದು ಬೆಳಿಗ್ಗೆ 10ಕ್ಕೆ ಅಮ್ಮನವರಿಗೆ ಭದ್ರಾ ಹಿನ್ನೀರಿನಲ್ಲಿ ಪುಣ್ಯ ಸ್ನಾನ ಮತ್ತು ನೂರ ಒಂದು ಪೂಜೆ ನಡೆಸಲಾಗುವುದು. ನಂತರ, ಅಮ್ಮನವರನ್ನು ಕೋಟೆ ಆಂಜನೇಯ ದೇವಸ್ಥಾನಕ್ಕೆ ಕರೆತರಲಾಗುವುದು. ಸಂಜೆ 7ಕ್ಕೆ ದೊಂದಿ ಸೇವೆಯೊಂದಿಗೆ ಅಮ್ಮನವರನ್ನು ಹೂವಿನ ಅಲಂಕಾರದೊಂದಿಗೆ ಹಾಗೂ ವಾದ್ಯದೊಂದಿಗೆ ಮೆರವಣಿಗೆ ಹೊರಟು ಕೊಟ್ಟೂರು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಮುಗಿಸಿಕೊಂಡು, ಅಮ್ಮನವರನ್ನು ಮೇದರ ಬೀದಿಗೆ ಕರೆತರಲಾಗುವುದು. ರಾತ್ರಿ 10ಕ್ಕೆ ಸ್ನೇಹ ಇವೆಂಟ್ಸ್ ಭದ್ರಾವತಿ ಇವರಿಂದ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿದೆ. ನಂತರ ಕರಿಯಮ್ಮ ದೇವಿಯ ಸಾನ್ನಿಧ್ಯದಲ್ಲಿ ಕೆಂಡಾರ್ಚನೆಯ ವಿಧಿವಿಧಾನ ಆರಂಭಿಸಿ, ಕೆಂಡಾರ್ಚನೆಗೆ ಅಗ್ನಿ ಸ್ಪರ್ಶ ಮಾಡುವುದು.

25ರಂದು ಬೆಳಗಿನ ಜಾವ 4ಕ್ಕೆ ಗಂಗಾ ಪೂಜೆಗೆ ತೆರಳಿ ಬ್ರಾಹ್ಮಿ ಮುಹೂರ್ತದಲ್ಲಿ ಕೆಂಡಾರ್ಚನೆ ಕಾರ್ಯಕ್ರಮ ನಡೆಸಲಾಗುವುದು. ಬೆಳಿಗ್ಗೆ 10ಕ್ಕೆ ಅಮ್ಮನವರ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಓಕುಳಿ ಸೇವೆ,ಸಂಜೆ 5ಕ್ಕೆ ವಿಶೇಷ ಭವ್ಯ ಮಂಟಪದೊಂದಿಗೆ ಸಿಡಿಮದ್ದಿನ ಪ್ರದರ್ಶನ, ವಾದ್ಯ, ತಮಟೆ, ಹಾಸ್ಯ ಗೊಂಬೆಗಳು ಹಾಗೂ ವೀರಗಾಸೆ ತಂಡದೊಂದಿಗೆ ರಾಜಬೀದಿಯಲ್ಲಿ ಅಮ್ಮನವರ ಮೆರವಣಿಗೆ ಜರುಗಲಿದೆ.

26ರಂದು ಸಂಜೆ ಅಮ್ಮನವರಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. 27ರಂದು ರಾತ್ರಿ 7.30ಕ್ಕೆ ಕೊಲ್ಲಾರೇಶ್ವರಿ ದೇವಿ, ಕರಿಯಮ್ಮ ದೇವಿ ಮತ್ತು ಅಂತರಘಟ್ಟಮ್ಮ ದೇವಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

28ರಂದು ಬೆಳಿಗ್ಗೆ 11ಕ್ಕೆ ಅಂತರಘಟ್ಟಮ್ಮ ಮತ್ತು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮತ್ತು ಹರಕೆ ಸೇವೆ ಮಾಡಲಾಗುವುದು. ರಾತ್ರಿ 7.30ಕ್ಕೆ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಪ್ರಧಾನ ಆರ್ಚಕರಾದ ಆರ್. ಶಿವಾನಂದ, ಜಿ.ಎಂ. ಚಂದ್ರಣ್ಣ, ರಂಭಾಪುರಿ ಪೀಠದ ಸಿದ್ದಲಿಂಗಯ್ಯ ಶಾಸ್ತ್ರಿಗಳು ಹಾಗೂ ದೇವಸ್ಥಾನ ನಿತ್ಯ ಪೂಜಾ ಅರ್ಚಕ ಶಿವರಾಜ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-126-1369641809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.