ನರಸಿಂಹರಾಜಪುರ: ಇಲ್ಲಿನ ರಾಗ ಮಯೂರಿ ಅಕಾಡೆಮಿ ಆಶ್ರಯದಲ್ಲಿ ಅಗ್ರಹಾರದ ಉಮಾಮಹೇಶ್ವರ ಸಭಾಭವನದಲ್ಲಿ ನಡೆಯುತ್ತಿದ್ದ ಎರಡು ದಿನಗಳ ಭರತ ನಾಟ್ಯ ಕಾರ್ಯಾಗಾರವು ಮುಕ್ತಾಯವಾಯಿತು.

ಪುತ್ತೂರಿನ ವಿದ್ವಾನ್ ಬಿ.ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಕಾರ್ಯಾಗಾರ ನಡೆಸಿಕೊಟ್ಟರು. 4 ವರ್ಷದಿಂದ 7 ವರ್ಷದ ಮಕ್ಕಳಿಗೆ ದೇವರ ನಾಮ, 7 ವರ್ಷ ವಯಸ್ಸಿನಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ರಾಗ ಮಾಲಿಕೆ ರಾಗದ ದೇವರ ನಾಮ, 10 ವರ್ಷ ಮೇಲ್ಪಟ್ಟ ಎಲ್ಲ ಸೀನಿಯರ್ ವಿದ್ಯಾರ್ಥಿಗಳಿಗೆ ಮೋಹನ ರಾಗದ ಅಂತಪುರ ಗೀತೆಗಳನ್ನು ಕಲಿಸಿದರು. ಮಕ್ಕಳಿಗೆ ಭರತನಾಟ್ಯದ ನವರಸಗಳನ್ನು ಹೇಳಿಕೊಟ್ಟು ಮಕ್ಕಳಿಂದಲೇ ಅಭಿನಯಿಸಿದರು. ಇದರ ಜೊತೆಗೆ ಭರತನಾಟ್ಯ ಕಾರ್ಯಾಗಾರದಲ್ಲಿ ರಾಮಾಯಾಣ, ಮಹಾಭಾರತ ಸೇರಿದಂತೆ ಪುರಾಣದ ಕಥೆಗಳು ಹಾಗೂ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿದರು.

ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರು, ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಭಾಗವಹಿಸಿದ ಎಲ್ಲ 30 ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ರಾಗ ಮಯೂರಿ ಅಕಾಡೆಮಿ ವತಿಯಿಂದ ವಿದ್ವಾನ್ ಪುತ್ತೂರು ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿ ಕಲಾ ಅವರನ್ನು ಸನ್ಮಾನಿಸಲಾಯಿತು.

ರಾಗ ಮಯೂರಿ ಅಕಾಡೆಮಿಯ ನೃತ್ಯ ಶಿಕ್ಷಕಿ ಹಾಗೂ ನಿರ್ದೇಶಕಿ ಅಂಕಿತ ಪ್ರಜ್ವಲ್, ಅಕಾಡೆಮಿಯ ಕಾರ್ಯದರ್ಶಿ ಪ್ರಜ್ವಲ್, ಸುನಿತಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-126-172230251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.