ನರಸಿಂಹರಾಜಪುರ: ತಾಲ್ಲೂಕಿನ ಬಾಳೆಕೊಪ್ಪ ಸಮೀಪ ಕಾರು ಡಿಕ್ಕಿಯಾಗಿ ಒಂದು ವರ್ಷ ವಯಸ್ಸಿನ ಗಂಡು ಜಿಂಕೆ ಶುಕ್ರವಾರ ಮೃತಪಟ್ಟಿದೆ.

ಶಿವಮೊಗ್ಗ– ನರಸಿಂಹರಾಜಪುರ ಮುಖ್ಯ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದಾಗ ಜಿಂಕೆ ರಸ್ತೆಗೆ ಅಡ್ಡ ಬಂದು ಡಿಕ್ಕಿಯಾಗಿದೆ. ಕಾರು ಚಾಲಕ ನಿಲ್ಲಿಸದೆ ಹೋಗಿದ್ದು, ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಡಗಬೈಲು ಗಸ್ತು ಅರಣ್ಯಪಾಲಕ ವೈ.ಶಂಕರ್ ಹಾಗೂ ಸೂಸಲವಾನಿ ಗಸ್ತು ಅರಣ್ಯಪಾಲಕ ಜಯಣ್ಣ ಮಹಜರು ನಡೆಸಿದರು.

ಮರಣೋತ್ತರ ಪರೀಕ್ಷೆ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದೆಂದು ಸೂಸಲವಾನಿ ಗಸ್ತು ಅರಣ್ಯ ಪಾಲಕ ಜಯಣ್ಣ ತಿಳಿಸಿದರು. ಅಪೂರ್ವರಾಘು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-126-798084855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.