ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಕ್ರೈಸ್ತರು ಯೇಸು ಕ್ರಿಸ್ತರು ಪುನರುತ್ಥಾನಗೊಂಡ ಪವಿತ್ರ ದಿನವಾದ ಈಸ್ಟರ್ ಸಂಡೇಯನ್ನು ಆಚರಿಸಿದರು.

ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ಪಟ್ಟಣದ ಬಸ್ತಿಮಠದ ಸಮೀಪವಿರುವ ಸೆಂಟ್ ಮೇರಿಸ್ ಆರ್ಥೋಡಕ್ಸ್ ಸಿರಿಯನ್ ಚರ್ಚ್ನಲ್ಲಿ ಫಾ.ಬೆನ್ನಿಮ್ಯಾಥ್ಯೂ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಪಟ್ಟಣದ ಮೆಸ್ಕಾಂ ಇಲಾಖೆಯ ಸಮೀಪವಿರುವ ರೋಮನ್ ಕಥೋಲಿಕ್ ಕೆಥ್ರೆಡಲ್ ಚರ್ಚ್ನಲ್ಲಿ ಶನಿವಾರ ರಾತ್ರಿ ಭದ್ರಾವತಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಜೋಸೆಫ್ ಅರುಮಚಾಡತ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಉಪನ್ಯಾಸ ಏರ್ಪಡಿಸಲಾಗಿತ್ತು. ಭದ್ರಾವತಿಯ ಫಾ.ಥೋಮಸ್ ಚಿತ್ತಿರ ಪಳ್ಳಿ, ನರಸಿಂಹರಾಜಪುರ ಚರ್ಚಿನ ಫಾಧರ್ ಟಿನೋ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-126-1174456226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.