ನರಸಿಂಹರಾಜಪುರ: ‘ಗ್ರಾಮ ಅರಣ್ಯ ಸಮಿತಿಗಳು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರನ್ನು ಬೆಸೆಯುವ ಕೆಲಸ ಮಾಡುತ್ತವೆ’ ಎಂದು ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ. ಆದರ್ಶ ಹೇಳಿದರು.

ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಸಮಗ್ರ ಪುನಃಶ್ಚೇತನ ಕಾರ್ಯಾಗಾರ, ಸಮಗ್ರ ನಿರ್ವಹಣಾ ಯೋಜನೆ ಹಾಗೂ ಸರ್ವಸದಸ್ಯರ ಮಹಾ ಮಂಡಳಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಗ್ರಾಮ ಅರಣ್ಯ ಸಮಿತಿ ಪ್ರಾರಂಭವಾಯಿತು. ಅರಣ್ಯ ಇಲಾಖೆಗೆ ಅರಣ್ಯ ಸಂಪತ್ತು ನೋಡಿಕೊಳ್ಳುವುದು ಕಷ್ಟಕರವಾಗಿದ್ದರಿಂದ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಯಿತು. ಈ ಗ್ರಾಮ ಅರಣ್ಯ ಸಮಿತಿ ರಚನೆಯಾದ ನಂತರ ಅರಣ್ಯ ಇಲಾಖೆಯು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಕಾಪಾಡಿದೆ. ಗ್ರಾಮ ಅರಣ್ಯ ಸಮಿತಿಗೂ ಮೊದಲು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಮಧ್ಯೆ ಕಂದಕ ಸೃಷ್ಟಿಯಾಗಿತ್ತು. ಈಗ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಬಾಂಧವ್ಯ ಬೆಳೆದಿದೆ ಎಂದರು.

ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿಯ ಸ್ಥಾಪಕ ಅಧ್ಯಕ್ಷ ಇ.ಸಿ. ಜೋಯಿ ಮಾತನಾಡಿ, ‘30 ವರ್ಷಗ ಹಿಂದೆ ನಾಗಲಾಪುರ ಗ್ರಾಮ ಅರಣ್ಯ ಸಮಿತಿ ಪ್ರಾರಂಭವಾಗಿದ್ದು, ಕೊಪ್ಪ ಅರಣ್ಯ ವಲಯದಲ್ಲೇ ಅತ್ಯುತ್ತಮ ಗ್ರಾಮ ಅರಣ್ಯ ಸಮಿತಿ ಎಂಬ ಹೆಸರು ಪಡೆದಿತ್ತು. ನೂರಾರು ಎಕರೆಯಲ್ಲಿ ಗಿಡ ನೆಡಲಾಗಿತ್ತು. ಅನುದಾನದ ಕೊರತೆಯಿಂದ ಈಗ ಚಟುವಟಿಕೆ ಕಡಿಮೆಯಾಗಿದೆ. ಗ್ರಾಮ ಅರಣ್ಯ ಸಮಿತಿ ಬೆಳೆಸಿದ ನೆಡುತೋಪು ಕಡಿತಲೆಯಾದರೆ ಅದರ ಲಾಭ ಗ್ರಾಮ ಅರಣ್ಯ ಸಮಿತಿಗೂ ಬರಲಿದೆ ಎಂದರು.

ಬೆಂಗಳೂರಿನ ಅರಣ್ಯ ಭವನದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೆ. ನಾಗರಾಜ್, ಅರಣ್ಯ ಸಂಪತ್ತು ಉಳಿಸಲು ಗ್ರಾಮಸ್ಥರು ಮನಸ್ಸು ಮಾಡಬೇಕು. ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು. ಗ್ರಾಮ ಅರಣ್ಯ ಸಮಿತಿ ಮೂಲಕ ಬೆಳೆಸಿದ ನೆಡುತೋಪು ಕಡಿತಲೆಯ ನಂತರ ಶೇ 75ರಷ್ಟು ಹಣವನ್ನು ಗ್ರಾಮ ಅರಣ್ಯ ಸಮಿತಿಗೆ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೆ.ರವಿ ಮಾತನಾಡಿದರು. ಕಂದಾಯ ನಿರೀಕ್ಷಕ ಮಂಜುನಾಥ್, ಪತಂಜಲಿ ಸಂಸ್ಥೆಯ ಆಡಳಿತಾಧಿಕಾರಿ ಎಂ.ಪೂವಯ್ಯ, ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಎಂ.ಡಿ. ಸಜಿ, ಜೇಮ್ಸ್, ಶಿವಮೊಗ್ಗ ಪತಂಜಲಿ ಸಂಸ್ಥೆಯ ಸರಳಾ ವಾಸನ್, ಯಶೋದಾ ನಾಗರಾಜ್, ಕಲಾ ವೀರೇಶ್, ಉಪ ವಲಯ ಅರಣ್ಯಾಧಿಕಾರಿ ರಂಗನಾಥ ಅಥಾಲಿಟಿ, ಗಸ್ತು ಅರಣ್ಯ ಪಾಲಕ ಎಂ.ಡಿ.ನಾಗರಾಜ, ಮಮತಾ ಭಾಗವಹಿಸಿದ್ದರು.

ಹೊನ್ನಾಳಿಯ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಅವರಿಗೆ ಸಾಲುಮರದ ತಿಮ್ಮಕ್ಕ ಸದ್ಭಾವನಾ ಪ್ರಶಸ್ತಿ ನೀಡಲಾಯಿತು. ಅತಿಥಿಗಳನ್ನು ಗೌರವಿಸಲಾಯಿತು. ಭಾಗವಹಿಸಿದ್ದ ಸಮಿತಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-126-687406111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.