ನರಸಿಂಹರಾಜಪುರ: ಆರೋಗ್ಯ ಕ್ಷೇತ್ರಕ್ಕೆ ದಾನಿಗಳ ಕೊಡುಗೆ ಶ್ಲಾಘನೀಯ ಎಂದು ಶಾಸಕ ಟಿ.ಡಿ. ರಾಜೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೀಮ ಗೋಲ್ಡ್ ಕಂಪನಿ ವತಿಯಿಂದ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ಹಸ್ತಾಂತರ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ತುರ್ತು ಸೇವೆಯ ಅಗತ್ಯವು ಹೆಚ್ಚಾಗಿದ್ದು, ಈ ಆಂಬುಲೆನ್ಸ್ ಮೂಲಕ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡಬೇಕು. ಭೀಮಾ ಗೋಲ್ಡ್ ವತಿಯಿಂದ ನೀಡಿರುವ ಈ ಆಂಬುಲೆನ್ಸ್ ಸದುಪಯೋಗವಾಗಬೇಕು ಎಂದರು.

ಭದ್ರಾ ಗೋಲ್ಡ್ನ ಅಸೋಸಿಯೇಟ್ ಮ್ಯಾನೇಜರ್ ರಾಘವೇಂದ್ರ ಜಿ. ಭಟ್ ಮಾತನಾಡಿ, ‘ಸಂಸ್ಥೆ 100 ವರ್ಷಗಳ ಇತಿಹಾಸ ಹೊಂದಿದ್ದು, ಲಾಭಾಂಶದ ಒಂದು ಅಂಶವನ್ನು ಸಾರ್ವಜನಿಕ ಹಿತಕ್ಕಾಗಿ ಅದರಲ್ಲೂ ಆರೋಗ್ಯ ಇಲಾಖೆ ಸೇವೆಗಾಗಿ ಮೀಸಲಿಡಲಾಗಿದೆ’ ಎಂದರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ, ‘ಆಂಬುಲೆನ್ಸ್ ನೀಡುವಲ್ಲಿ ಮೆಣಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿನು ಹಾಗೂ ನಿಖಿಲ್ ಅವರ ಪಾತ್ರ ಹೆಚ್ಚಾಗಿದೆ’ ಎಂದರು. ಮೆಣಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿನು ಮಾತನಾಡಿದರು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ. ರಾಜೇಂದ್ರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಎಂ. ಸುಂದರೇಶ್, ತಾಲ್ಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ. ಜೋಯಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್. ಸದಾಶಿವ, ಮುಖಂಡರಾದ ಉಪೇಂದ್ರ, ಜುಬೇದಾ, ಕಂಪನಿಯ ಕ್ಲಸ್ಟರ್ ಮುಖ್ಯಸ್ಥ ಕಾರ್ತಿಕ್ ರಾವ್, ಶಾಖಾ ವ್ಯವಸ್ಥಾಪಕ ಕೆ.ಪಿ. ಎನ್ ಶ್ರೀನಿವಾಸ್, ಅಸೋಸಿಯೇಟ್ ಮ್ಯಾನೇಜರ್ ಎಂ.ಬಿ. ನಿಖಿಲ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಹೇಂದ್ರ ಕಿರೀಟಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-2138797563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.