ನರಸಿಂಹರಾಜಪುರ: ಆಸ್ಪತ್ರೆಯೊಳಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾ ಮಕ ದಳದವರು ಯಾವ ರೀತಿ ಕಾರ್ಯಾ ಚರಣೆ ನಡೆಸಿ, ರೋಗಿಗಳು, ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರುತ್ತಾರೆ ಎಂಬ ಬಗ್ಗೆ ಅಗ್ನಿಶಾಮಕ ದಳದವರು ಶನಿವಾರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ 20 ನಿಮಿಷಗಳ ಅಣಕು ಪ್ರದರ್ಶನ ನಡೆಸಿದರು.

ಮುಖ್ಯ ರಸ್ತೆಯಿಂದ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಸೈರನ್ ಮೊಳಗಿಸುತ್ತಾ ಅಗ್ನಿಶಾಮಕ ವಾಹನ ಬರುವ ಮೂಲಕ ಅಣಕು ಕಾರ್ಯಾಚರಣೆ ಪ್ರಾರಂಭವಾ ಯಿತು. ಆಸ್ಪತ್ರೆಯ ಹೊರ ಆವರಣ ಹಾಗೂ ಒಳಗೆ ಕೃತಕವಾಗಿ ಹೊಗೆ ಹಾಕಲಾಗಿತ್ತು. ಅಗ್ನಿಶಾಮಕ ದಳದ 12ಕ್ಕೂ ಹೆಚ್ಚು ಸಿಬ್ಬಂದಿ ವೇಗವಾಗಿ ಓಡುತ್ತಾ ಬಂದು, ಉಸಿರಾಟದ ಸಲಕರಣೆ ಮೂಲಕ ಆಸ್ಪತ್ರೆಯೊಳಗೆ ನುಗ್ಗಿ ರೋಗಿಗಳನ್ನು ಸ್ಟ್ರೆಚರ್ ಮೂಲಕ ಹೊರಗೆ ತಂದು ಆಂಬುಲೆನ್ಸ್ ವಾಹನದಲ್ಲಿ ಮಲಗಿಸಲಾಯಿತು. ಈ ಗಡಿಬಿಡಿ, ಓಡಾಟ ಕಂಡು ಕೆಲವು ರೋಗಿಗಳು, ಕುಟುಂಬದವರು ನಿಜಕ್ಕೂ ಬೆಂಕಿ ಬಿದ್ದಿದೆ ಎಂದು ಗಾಬರಿಯಾದರು.

ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಇತರ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿ, ರೋಗಿಗಳು, ಸಾರ್ವಜನಿಕರು ಕಾರ್ಯಾಚರಣೆ ವೀಕ್ಷಣೆ ಮಾಡಿದರು. ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ದೇವೇಂದ್ರ ನಾಯಕ್, ಪ್ರಮುಖ ಅಗ್ನಿಶಾಮಕ ಸಂತೋಷ್ ಕುಮಾರ್ ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-126-628812282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.