ನರಸಿಂಹರಾಜಪುರ: ಜೆಸಿಐ ಸಂಸ್ಥೆಯ ವಲಯ ಅರ್ಧ ವಾರ್ಷಿಕ ಸಮ್ಮೇಳನವನ್ನು ನರಸಿಂಹರಾಜಪುರ ಜ್ವಾಲಾಮಾಲಿನಿ ಸಂಸ್ಥೆಯ ಆತಿಥ್ಯದಲ್ಲಿ ನಡೆಯಲು ತೀರ್ಮಾನಿಸಲಾಗಿದ್ದು, ಜೂನ್ 7ರಂದು ಮಡಬೂರು ಡಿ.ಎನ್.ವಿ.ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಜೇಸಿ ವಲಯ 14ರ ಉಪಾಧ್ಯಕ್ಷ ವಿ.ಎಸ್.ಅಶೋಕ್ ಹೇಳಿದರು.

ಇಲ್ಲಿನ ಜೆಸಿಐ ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಲಯ ಅರ್ಧ ವಾರ್ಷಿಕ ಸಮ್ಮೇಳನ ಯಶಸ್ಸಿಗೆ ಎಲ್ಲಾ ಘಟಕಗಳ ಪೂರ್ವ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಸಹಕಾರ ನೀಡಬೇಕು. ಇತ್ತೀಚೆಗೆ ಜೆಸಿಐ ಸಂಸ್ಥೆಯಲ್ಲಿ ಅನೇಕ ಬದಲಾವಣೆಯಾಗಿದ್ದು, ಜೆಸಿ ರೆಟ್ ಬದಲಾಗಿ ಲೇಡಿ ಮಹಿಳಾ ಘಟಕ ಪ್ರಾರಂಭಿಸಲಾಗಿದೆ. ಮಹಿಳೆಯರು ಜೆಸಿಐ ಸಂಸ್ಥೆಯ ಸದಸ್ಯರೂ ಆಗಬಹುದು ಅಥವಾ ಲೇಡಿ ಮಹಿಳಾ ಘಟಕದ ಸದಸ್ಯರಾಗಬಹುದು. ಮಾ.29ರಂದು ಶೃಂಗೇರಿಯಲ್ಲಿ ಪರಿಣಾಮಕಾರಿ ಭಾಷಣ ಕಲೆ ತರಬೇತಿ ನಡೆಯಲಿದೆ ಎಂದರು.

ಜೆಸಿಐ ವಲಯ 14ರ ಸಮುದಾಯ ಅಭಿವೃದ್ಧಿ ನಿರ್ದೇಶಕ ಸೃಜನ್, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಆದರ್ಶ ಬಿ ಗೌಡ, 16 ವರ್ಷಗಳ ನಂತರ ಅರ್ಧವಾರ್ಷಿಕ ಸಮ್ಮೇಳನ ಮಾಡುವ ಜವಾಬ್ದಾರಿ ನಮ್ಮ ಘಟಕಕ್ಕೆ ಬಂದಿದೆ ಎಂದರು. ಹೊಸ ಸದಸ್ಯರಿಗೆ ಜೆಸಿಐ ಪಿನ್ ನೀಡಿ ಸ್ವಾಗತಿಸಲಾಯಿತು. ಘಟಕ ಅಧಿಕಾರಿ ಶ್ರೀಕಾಂತ್, ಜ್ವಾಲಾಮಾಲಿನಿ ಸಂಸ್ಥೆಯ ಕಾರ್ಯದರ್ಶಿ ರಜಿತ್ ವಗ್ಗಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-490818227

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.