ನರಸಿಂಹರಾಜಪುರ: ‘2023ರ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದಾಗಲೇ ಜೀವರಾಜ್ ಗೆದ್ದಿದ್ದಾರೆ. ಈಗ ಸಂಭ್ರಮಾಚರಣೆ ಮಾಡುತ್ತಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣ ಕುಮಾರ್ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರಿಂದ ನಡೆದ ಸಂಭ್ರಮಾಚರಣೆ, ಪಟಾಕಿ ಸಿಡಿಸಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೃಂಗೇರಿ ಕ್ಷೇತ್ರದಲ್ಲಿ ಸತ್ಯಕ್ಕೆ ಜಯವಾಗಿದೆ. 8 ವರ್ಷಗಳಿಂದ ಜೀವರಾಜ್ ಅಧಿಕಾರದಲ್ಲಿಲ್ಲ. ಆದರೂ ಕಾಂಗ್ರೆಸ್ ಮುಖಂಡರು ಜೀವರಾಜ್ ಮತ ಎಣಿಕೆಯಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ ಸರ್ಕಾರ ನಡೆಸುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು ಅವರ ಕೈಯಲ್ಲೇ ಇದ್ದರೂ ವ್ಯರ್ಥ ಆರೋಪ ಮಾಡುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಸೋತಿದ್ದಾರೆ. 3 ವರ್ಷ ಮೋಸ ಮಾಡಿ ಅಧಿಕಾರ ನಡೆಸಿ ಸರ್ಕಾರಿ ಸೌಲಭ್ಯ ಉಪಯೋಗಿಸಿಕೊಂಡಿದ್ದಾರೆ ಎಂದು ದೂರಿದರು.

ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಬಿಜೆಪಿ ಹೋರಾಟ ಮಾಡುತ್ತದೆ. ರಾಜೇಗೌಡ ಅವರು ಎಣಿಕೆ ಕಾರ್ಯ ಮುಗಿಯುವ ಮುನ್ನವೇ ವಿಜಯೋತ್ಸವ ಮಾಡಿದ್ದಾರೆ. ಆದರೆ ಬಿಜೆಪಿ ಅಧಿಕೃತವಾಗಿ ಚುನಾವಣಾ ಆಯೋಗ ಪ್ರಮಾಣಪತ್ರ ನೀಡಿದ ನಂತರವೇ ವಿಜಯೋತ್ಸವ ನಡೆಸುತ್ತಿದೆ ಎಂದರು.

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ. ನೀಲೇಶ್ ಮಾತನಾಡಿ, ತಾಳ್ಮೆಯಿಂದ ಕಾಯುತ್ತಿದ್ದ ಶೃಂಗೇರಿ ಕ್ಷೇತ್ರದ ಮತದಾರರಿಗೆ ನ್ಯಾಯ ಸಿಕ್ಕಿದೆ. 3 ವರ್ಷದ ಹಿಂದೆ ಸಿಗಬೇಕಾಗಿದ್ದ ಶಾಸಕ ಸ್ಥಾನ ಈಗ ಸಿಕ್ಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು 2023ರಲ್ಲಿ ಜಿಲ್ಲಾಡಳಿತ, ಚುನಾವಣಾ ಆಯೋಗ ಅಧಿಕಾರ ದುರುಪಯೋಗ ಮಾಡಿಕೊಂಡಿತ್ತು. ತಿರಸ್ಕೃತವಾದ 255 ಅಂಚೆ ಮತಗಳನ್ನು ರಾಜೇಗೌಡರಿಗೆ ಹಾಕಿಸಿ 201 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಬಿಂಬಿಸಿದ್ದರು ಎಂದು ದೂರಿದರು.

2023ರ ಚುನಾವಣೆ ಎಣಿಕೆ ದಿನವೇ ಮರು ಮತಎಣಿಕೆಗೆ ಜೀವರಾಜ್ ಆಗ್ರಹಿಸಿದ್ದರು. ಆದರೆ ಅವರ ಮನವಿಗೆ ಪುರಸ್ಕಾರ ಸಿಗದಿದ್ದರಿಂದ ಕಾನೂನು ಹೋರಾಟ ಮಾಡಿ ಹೈಕೋರ್ಟಿಗೆ ಹೋಗಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ಮರು ಎಣಿಕೆಯಾಗಿ ಸತ್ಯ ಗೆದ್ದಿದೆ ಎಂದರು.

ಬಿಜೆಪಿ ಮುಖಂಡರಾದ ಬಿ.ಎಸ್. ಆಶೀಶ್ ಕುಮಾರ್, ಪರ್ವೀಜ್, ಕೆಸವಿ ಮಂಜುನಾಥ್, ರಶ್ಮಿ ದಯಾನಂದ್, ಪ್ರೀತಮ್, ಅಶ್ವನ್, ಎಚ್.ಡಿ. ಲೋಕೇಶ್, ಸುರಭಿ ರಾಜೇಂದ್ರ, ಎನ್.ಎಂ. ಕಾಂತರಾಜ್, ಜಯರಾಂ, ಈಚಿಕೆರೆ ಜಗದೀಶ್, ವೈ.ಎಸ್. ರವಿ, ಮಂಜುನಾಥ್ ಲಾಡ್, ಎಸ್.ಎಸ್. ಸಂತೋಷ ಕುಮಾರ್, ದಿವಾಕರ್, ಡಾ.ಮಹೇಶ್ ಭಂಡಾರಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-126-6194654

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.