ನರಸಿಂಹರಾಜಪುರ: ಶಿವಮೊಗ್ಗಕ್ಕೆ ತೆರಳುವ ಕೆಎಸ್ಆರ್ಟಿಸಿ ಬಸ್ನಲ್ಲಿ ರಾವೂರಿನ ಮೀನ್ ಕ್ಯಾಂಪಿನ ಮಹಿಳೆಯೊಬ್ಬರು ಸೀಟಿಗಾಗಿ ಗಲಾಟೆ ನಡೆಸಿ, ಬಸ್ನಲ್ಲಿ ಕುಳಿತಿದ್ದ ವೃದ್ಧರೊಬ್ಬರ ಮೇಲೆ ಬುಧವಾರ ಹಲ್ಲೆ ನಡೆಸಿದ್ದಾರೆ.

ನರಸಿಂಹರಾಜಪುರದ ಮೀನ್ ಕ್ಯಾಂಪ್ನ ನಿವಾಸಿ ಮಹಿಳೆಯೊಬ್ಬರು ಶಿವಮೊಗ್ಗದಲ್ಲಿ ವಾಸವಿದ್ದಾರೆ. ಆಗಾಗ ನರಸಿಂಹರಾಜಪುರ ಮೀನ್ ಕ್ಯಾಂಪ್ಗೆ ಬಂದು ಹೋಗುತ್ತಿದ್ದರು. ಶೃಂಗೇರಿ- ಶಿವಮೊಗ್ಗ ನಡುವೆ ಸಂಚರಿಸುವ ಸರ್ಕಾರಿ ಬಸ್ ಹತ್ತಿದ್ದರು. ಬಸ್ನ ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಆ ಮಹಿಳೆಗೆ ಸೀಟು ಲಭಿಸಿರಲಿಲ್ಲ. ಮುಂದಿನ ಸೀಟಿನಲ್ಲಿ ಕುಳಿತು ಶೃಂಗೇರಿಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರಿಗೆ ನನಗೆ ಕುಳಿತುಕೊಳ್ಳಲು ಜಾಗ ಕೊಡಿ ಎಂದು ಗಲಾಟೆ ಮಾಡಿದ್ದರು. ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ, ‘ ಕುಳಿತುಕೊಳ್ಳಲು ಜಾಗ ಕೊಡಿ’ ಎಂದು ಗಲಾಟೆ ಮಾಡಿದ್ದರು. ಮಹಿಳೆಯ ಕೂಗಾಟ ನೋಡಿ ಬಸ್ ನಿರ್ವಾಹಕ ಮತ್ತು ಚಾಲಕ, ‘ಪ್ರಯಾಣಿಕರಿಗೆ ಈ ರೀತಿ ತೊಂದರೆ ಕೊಟ್ಟರೆ ನಿಮ್ಮನ್ನ ಬಸ್ಸಿನಿಂದ ಇಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಆ ಮಹಿಳೆ ನಿರ್ವಾಹಕ ಮತ್ತು ಚಾಲಕನ ಜೊತೆಯೂ ಜಗಳವಾಡಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಮಹಿಳೆಯ ರಂಪಾಟ ನೋಡಿ ಚಾಲಕ ಬಸ್ಸನ್ನು ಸಮೀಪದ ಪೋಲಿಸ್ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಮಧ್ಯ ಪ್ರವೇಶ ಮಾಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ, ಮಹಿಳೆಗೆ ಬಸ್ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದರು. ಆದರೂ ಪಟ್ಟು ಬಿಡದ ಮಹಿಳೆ ಪೊಲೀಸರ ಜೊತೆಯೂ ಜಗಳವಾಡಿದ್ದರು. ಇಳಿಯುವಾಗ ಬಸ್ಸಿನಲ್ಲಿ ಕುಳಿತಿದ್ದ ವೃದ್ದರೊಬ್ಬರ ಕೆನ್ನೆಗೆ ಹೊಡೆದಿದ್ದರು‘ ಎಂದು ಅವರು ತಿಳಿಸಿದರು.

ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆದೊಯ್ದು ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಮೊಕದ್ದಮೆ ದಾಖಲಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸೀಟಿಗಾಗಿ ಮಹಿಳೆ ನಡೆಸಿದ ಜಗಳದಿಂದಾಗಿ 1ಗಂಟೆಗೆ ಶಿವಮೊಗ್ಗ ಹೋರಡಬೇಕಾದ ಬಸ್ ಸುಮಾರು 1.30ರವರೆಗೂ ಪೊಲೀಸ್ ಠಾಣೆಯ ಸಮೀಪ ನಿಂತಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-126-375437518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.