ನರಸಿಂಹರಾಜಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಜಮೀನು ಮಂಜೂರು ಮಾಡಿಕೊಡುವ ವಿಚಾರ ತಹಶೀಲ್ದಾರ್ ಹಾಗೂ ಅಕ್ರಮ-ಸಕ್ರಮ ಸಮಿತಿಯ ಮಾಜಿ ಸದಸ್ಯ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ತಹಶೀಲ್ದಾರ್ ನೂರುಲ್ ಹುದಾ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ನಡೆಯಿತು.

ಅಕ್ರಮ–ಸಕ್ರಮ ಸಮಿತಿಯ ಮಾಜಿ ಸದಸ್ಯ ಮಂಜುನಾಥ್ ಅವರು ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದ, ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಯ ಜಮೀನುಗಳ ವಾಪಸ್ ನೀಡಿದ್ದು ಈ ಬಗ್ಗೆ ಜಂಟಿ ಸರ್ವೆ ಮಾಡಿಸಿ, ಕಂದಾಯ ಜಾಗವನ್ನು ಗುರುತಿಸಿ, ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಹಕ್ಕು ನೀಡುವಂತೆ ಮನವಿ ಮಾಡಿದ್ದರು ಹಾಗೂ 1964ರಿಂದಲೂ ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿರುವ ಹಾಗೂ ವಾಸ್ತವ್ಯ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅರಣ್ಯ ಇಲಾಖೆಯವರು 1930ರ ಆದೇಶದಂತೆ ಕಿರು ಅರಣ್ಯ ಎಂದು ಹಿಂಬರಹ ನೀಡುತ್ತಿದ್ದು, ಇದರಿಂದ ಹಕ್ಕುಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರ ಚರ್ಚೆಗೆ ಬಂತು.

ಎಸ್.ಐ.ಟಿ ಪರಿಶೀಲನೆ, ಅರಣ್ಯ ಮತ್ತು ಕಂದಾಯ ಇಲಾಖೆ ಅಡಿಯಲ್ಲಿ ಜಂಟಿ ಮೋಜಣಿ ಕಾರ್ಯ ಪ್ರಗತಿಯಲ್ಲಿದ್ದು, ನಂತರ ಸಮಸ್ಯೆ ಬಗೆಹರಿಸಲಾಗುವುದು ಎಂದು ತಹಶೀಲ್ದಾರ್ ಉತ್ತರಿಸಿದರು.

ಇದಕ್ಕೆ ತೃಪ್ತರಾಗದ ಮಂಜುನಾಥ್, ಎಸ್.ಐ.ಟಿಗೂ ಜಮೀನು ಮಂಜೂ ರಾತಿಗೂ ಯಾವುದೇ ಸಂಬಂಧವಿಲ್ಲ. ಅಕ್ರಮ–ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳಿಗೆ ಕಾಯ್ದೆ 64(ಎ) ಅಡಿ ಅರಣ್ಯ ಇಲಾಖೆ ಒಪ್ಪಿಗೆ ಪಡೆದು, ಜಮೀನು ಮಂಜೂರು ಮಾಡಬೇಕೆಂದು ಸರ್ಕಾರ ಎಲ್ಲೂ ಸುತ್ತೋಲೆ ಹೊರಡಿಸಿಲ್ಲ. ಅಧಿಕಾರಿಗಳು ಸುತ್ತೋಲೆ ಪ್ರಕಾರ ಅಧಿಕಾರ ನಡೆಸಬೇಕು ಎಂದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀ ಲ್ದಾರ್ ಮತ್ತು ಮಂಜುನಾಥ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ತಹಶೀಲ್ದಾರ್ ನೂರುಲ್ ಹುದಾ ಮಾತನಾಡಿ, ‘ಕಂದಾಯ, ಅರಣ್ಯ, ಪಂಚಾಯತ್ ರಾಜ್ ಇಲಾಖೆ ಸೇರಿ ಕೇವಲ ಎಸ್.ಐ.ಟಿ ಸಮೀಕ್ಷೆ ಮಾಡದೆ ಸಾಕಷ್ಟು ಜನರು 60 ವರ್ಷಗಳಿಂದ ವಾಸವಾಗಿದ್ದು, ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಹಾಗಾಗಿ ದಟ್ಟಾರಣ್ಯ, ಡಿ.ಸಿ ಮೀಸಲು ಎಲ್ಲಾ ಸಮೀಕ್ಷೆ ಮಾಡಲಾಗುತ್ತಿದೆ’ ಎಂದರು.

ಕೆ.ಪಿ.ಎಸ್.ಸಿ ಶಾಲೆಯಲ್ಲಿ ಯುಕೆಜಿ ಮಕ್ಕಳ ಪೋಷಕರಿಂದ ಶೌಚಾಲಯ ಸ್ವಚ್ಛತೆಗೆ ಹಾಗೂ ಇತರೇ ಖರ್ಚಿಗೆ ಹಣ ಕೇಳುತ್ತಿರುವ ವಿಷಯ ಪ್ರಸ್ತಾಪವಾಯಿತು.

ಸಮಾಜ ಕಲ್ಯಾಣ ಇಲಾಖೆಯ ನಿರಂಜನಮೂರ್ತಿ ಮಾತನಾಡಿ, ಪಟ್ಟಣದ ಕೆಪಿಎಸ್ ಶಾಲೆಯಲ್ಲಿ 436 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಒಟ್ಟು 13 ಶೌಚಾಲಯ ಹಾಗೂ 21 ಮೂತ್ರಾಲಯಗಳಿದ್ದು ಮಕ್ಕಳು ಪ್ರತಿನಿತ್ಯ ಉಪಯೋಗಿಸುತ್ತಾರೆ. ಶಾಲೆಗೆ ಯಾವುದೇ ಅನುದಾನ ಮತ್ತು ಡಿ ದರ್ಜೆ ನೌಕರರು ಇಲ್ಲದಿರುವುದರಿಂದ ಶೌಚಾಲಯ ಸ್ವಚ್ಛತೆಗೆ ಎಸ್ಡಿಎಂಸಿ ಮತ್ತು ಪೋಷಕರ ಒಪ್ಪಿಗೆ ಮೇಲೆ ದೇಣಿಗೆ ಸಂಗ್ರಹಿಸಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ನೀಡಿದ್ದಾರೆ ಎಂದರು.

ಪಟ್ಟಣದ ಅಂಬೇಡ್ಕರ್ ಭವನದ ಅಡುಗೆ ಕೊಠಡಿ ಕಾಮಗಾರಿಯನ್ನು ಮುಗಿಸಿಕೊಡಲು ಕೆಆರ್ಐಡಿಎಲ್ ಎಂಜಿನಿಯರ್ಗೆ ಶಾಸಕರು ಸೂಚಿಸಿ ದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಾಟೀಲ್ ಮಾಹಿತಿ ನೀಡಿದರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿಯಿಲ್ಲದೆ ಸಮಸ್ಯೆಯಾಗಿದೆ ಎಂದು ದಲಿತ ಮುಖಂಡ ಮೃತ್ಯುಂಜಯ ಗಮನಕ್ಕೆ ತಂದರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಖಾಲಿ ಇರುವ ಕೃಷಿ ಇಲಾಖೆಯ ಕಟ್ಟಡದಲ್ಲಿ ದಲಿತ ಸಂಘರ್ಷ ಸಮಿತಿಗೆ ಒಂದು ಕೊಠಡಿ ನೀಡುವಂತೆ ದಲಿತ ಮುಖಂಡ ಎಚ್.ಎಂ.ಶಿವಣ್ಣ ಒತ್ತಾಯಿಸಿದರು. ಪರಿಶೀಲಿಸುವುದಾಗಿ ಸಭೆ ಉತ್ತರಿಸಿತು.

ಸಭೆಗೆ ಹಲವು ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಮುಂದಿನ ಸಭೆಯಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ಹಾಜರಾಗಬೇಕು. ಪ್ರತಿನಿಧಿಗಳನ್ನು ಕಳಿಸುವಂತಿಲ್ಲ. ಇಂದಿನ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಶೀಲ್ದಾರ್ ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಪಾಟೀಲ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ದಲಿತ ಮುಖಂಡರಾದ ಡಿ.ರಾಮು, ಫಿಕಪ್ ಚಂದ್ರು, ಪವಿತ್ರ, ವಾಲ್ಮೀಕಿ ಸಂಘದ ನಗರ ಘಟಕದ ಅಧ್ಯಕ್ಷ ಮಂಜುನಾಥ್, ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-126-936880005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.