ನರಸಿಂಹರಾಜಪುರ: ‘ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರ ಕಾಲ ಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ ಮೇದರಬೀದಿಯ ಮಂಜುನಾಥ್ ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

1930ರ ಆದೇಶವನ್ನಿಟ್ಟುಕೊಂಡು ಬಹುತೇಕ ಕಂದಾಯ ಜಮೀನನ್ನು ಅರಣ್ಯ ಎನ್ನುತ್ತಿದ್ದಾರೆ. 1963–64ರಲ್ಲಿ ಬಹಳಷ್ಟು ಜನ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಮರಮಾಲ್ಕಿ ಕಟ್ಟಿಸಿಕೊಂಡಿದ್ದಾರೆ. ಹಕ್ಕುಪತ್ರ ಕೊಟ್ಟಿಲ್ಲ, ಪಕ್ಕ ಪೋಡಿಯಾಗಿಲ್ಲ, ಪಹಣಿ ಮಾಡಿಕೊಟ್ಟಿಲ್ಲ. ಜಮೀನು ಮಂಜೂರಾತಿಗೆ ಸುತ್ತೋಲೆಯಲ್ಲಿ ಇಲ್ಲದ ನಿಯಮದಂತೆ ಅರಣ್ಯ ಇಲಾಖೆಯ ಒಪ್ಪಿಗೆ ಕಳುಹಿಸುತ್ತಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು, ತಮಗೆ ಬೇಕಾದವರಿಗೆ ಹಕ್ಕುಪತ್ರ ನೀಡುತ್ತಾರೆ ಎಂದು ದೂರಿದರು.

ಲೋಕಾಯುಕ್ತ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಮಾತನಾಡಿ, ಯಾವ ಅಧಿಕಾರಿ ಅಧಿಕಾರ ದುರುಪಯೋಗ ಮಾಡಿದ್ದಾರೆ, ಹಣ ಪಡೆದು ಯಾರಿಗೆ ಹಕ್ಕುಪತ್ರ ನೀಡಿದ್ದಾರೆ ಎಂದು ಲಿಖಿತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾರ್ವಜನಿಕರು ಯಾವುದೇ ಇಲಾಖೆಗೆ ಅರ್ಜಿ ಸಲ್ಲಿಸುವಾಗ ಲಿಖಿತವಾಗಿ ನೀಡಬೇಕು. ಅಧಿಕಾರಿಗಳು ದೂರು ನೀಡಿದವರಿಗೆ ಹಿಂಬರ ನೀಡಬೇಕೆಂದು ಸೂಚಿಸಿದರು.

ವಾಲ್ಮೀಕಿ ಸಂಘದ ಶ್ರೀನಿವಾಸ್ ಮಾತನಾಡಿ, ಗುಬ್ಬಿಗಾ ಗ್ರಾಮದಲ್ಲಿ ಯಾರಿಗೋ ಮಂಜೂರಾಗಿದ್ದ ನಿವೇಶನವನ್ನು ಬೇರೆಯವರಿಗೆ ಪರಭಾರೆ ಮಾಡಿಕೊಂಡಿದ್ದಾರೆ. ಉಪವಿಭಾಗಾಧಿಕಾರಿ ಆದೇಶವಾಗಿದ್ದರೂ ಮೂಲ ಮಂಜೂರಾದವರಿಗೆ ನಿವೇಶನ ಬಿಡಿಸಿಕೊಟ್ಟಿಲ್ಲ ಎಂದು ದೂರಿದರು. ಗುಬ್ಬಿಗಾ ಗ್ರಾಮ ಪಂಚಾಯಿತಿಯಿಂದ ಫಲಾನುಭವಿಗಳಿಗೆ ನೀಡಲಾದ ಸಿಂಟೆಕ್ಸ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಸಿಂಸೆ ಗ್ರಾಮದಲ್ಲಿ ಮನೆ ನಿವೇ ಶನಕ್ಕೆ ಹಕ್ಕುಪತ್ರ ನೀಡಿದ್ದಾರೆ. ನಿವೇಶನ ಗುರುತಿಸಿಕೊಡುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದೇನೆ. ಮೋಜಣಿ ಇಲಾಖೆ ನಿವೇಶನ ಗುರುತಿಸಿಕೊಡುತ್ತಿಲ್ಲ ಎಂದು ಅಂಬೇಡ್ಕರ್ ನಗರದ ನಿರ್ಮಲಾ ದೂರಿದರು.

ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ. ಶಿವಣ್ಣ, ದಲಿತರಿಗೆ ಮಂಜೂರಾದ ಭೂಮಿಯನ್ನು ಬೇರೆ ವರ್ಗದ ಜನರು ಆಕ್ರಮಿಸಿದ್ದಾರೆ. ಮಂಜೂರಾದ ಜಮೀನು ಸರ್ವೆ ಮಾಡಿಕೊಡುತ್ತಿಲ್ಲ ಎಂದು ದೂರಿದರು. ಅಳಲಗೆರೆ ಗ್ರಾಮದ ಚೆರಿಯನ್ ಅವರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಮೀನು ಪೋಡಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್ ಕುಮಾರ್, ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಸಮಸ್ಯೆಯಿತ್ತು. ಪ್ರಸ್ತುತ ಅದು ಬಗೆಹರಿದಿದ್ದು ಅವರಿಗೆ ಆಶ್ರಯ ನಿವೇಶನದ ಹಕ್ಕುಪತ್ರ ಸಿದ್ಧವಾಗಿದ್ದು, ವಿತರಣೆಗೆ ಶಾಸಕರ ಬಳಿ ಸಮಯ ಕೇಳಲಾಗಿದೆ. ಮನೆ ಕಟ್ಟಿಕೊಡಲು ರಾಜೀವ್ ಗಾಂಧಿ ವಸತಿ ನಿಗಮದಿಂದ ₹1.20 ಲಕ್ಷ ಅನುದಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಶೆಟ್ಟಿಕೊಪ್ಪ ಗ್ರಾಮಸ್ಥ ಸುರೇಶ್ ಮಾತನಾಡಿದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಮಾತನಾಡಿ, ‘ಯಾರೇ ದೂರು ನೀಡಿದರೂ ಅಧಿಕಾರಿಗಳು ಹಿಂಬರ ನೀಡಬೇಕು. ಲೋಕಾಯುಕ್ತದಿಂದ ಮಾಹಿತಿ ಕೇಳಿದರೆ ಸ್ಪಂದಿಸಬೇಕು. ಕಡತಗಳು ಲಭ್ಯವಿಲ್ಲ ಎಂದು ತಾಲ್ಲೂಕು ಕಚೇರಿಯಿಂದ ಹಿಂಬರಗಳನ್ನು ನೀಡಲಾಗುತ್ತಿದೆ. ಈ ರೀತಿ ಉತ್ತರ ನೀಡಿದರೆ ಸಂಬಂಧಪಟ್ಟ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಲೋಕಾಯುಕ್ತರ ಹೆಸರಿನಲ್ಲಿ ಅಧಿಕಾರಿಗಳಿಗೆ ಯಾರೇ ಕರೆ ಮಾಡಿದರೂ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದರು.

ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ನೂರುಲ್ ಹುದಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-126-1677815876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.