ನರಸಿಂಹರಾಜಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದ ಶಂಕರಪುರದಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ಮನೆಯ ಒಳಗೆ ಇದ್ದ 67 ಗ್ರಾಂ ಬಂಗಾರದ ಒಡವೆಯನ್ನು ಕಳ್ಳತನ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಶಂಕರಪುರದ ಸುಗಂಧಿ ಎಂಬುವರು ತಮ್ಮ ಮೊಮ್ಮಗಳ ಜೊತೆ ವಾಸವಾಗಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಅವರ ಎರಡನೇ ಮಗಳ ಜೊತೆ ಮಂಗಳವಾರ ಮಧ್ಯಾಹ್ನ 11ರ ವೇಳೆಗೆ ಮನೆಗೆ ಬೀಗ ಹಾಕಿ ನರಸಿಂಹರಾಜಪುರ ಪಟ್ಟಣದ ಕೆನರಾ ಬ್ಯಾಂಕ್ಗೆ ಹೋಗಿದ್ದರು. ಬ್ಯಾಂಕ್ನಿಂದ ವಾಪಸ್ ಮನೆಗೆ ಬರುವಷ್ಟರಲ್ಲಿ ಮನೆಯ ಮುಂಬಾಗಿಲಿನ ಲಾಕ್ ಮುರಿದಿತ್ತು. ಒಳಹೋಗಿ ನೋಡಿದಾಗ, ಕಪಾಟಿನ ಬೀಗ ಮುರಿದು, ಬಟ್ಟೆಯನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ. ಇನ್ನೊಂದು ಕೊಠಡಿಯ ಕಪಾಟಿನಲ್ಲಿದ್ದ ಬಂಗಾರದ ಓಲೆ, ಬ್ಯಾಗ್ನಲ್ಲಿ ಇಟ್ಟಿದ್ದ ತಾಳಿ ಸರ, ಬಂಗಾರದ ಚೈನು ಸೇರಿ ಒಟ್ಟು 67 ಗ್ರಾಂ ತೂಕದ ₹6.70 ಲಕ್ಷ ಮೌಲ್ಯದ ಬಂಗಾರ ಕಳವಾಗಿರುವುದು ಅರಿವಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-126-649094888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.