ನರಸಿಂಹರಾಜಪುರ: ‘ವೈದ್ಯರು ಚಿಕಿತ್ಸೆ ಮೂಲಕ ರೋಗಗಳನ್ನು ಗುಣಪಡಿಸಬಹುದು. ಆದರೆ, ಇಡೀದಿನ ರೋಗಿಗಳ ಜತೆಗಿದ್ದು ಅವರ ಬೇಕು– ಬೇಡಗಳನ್ನು ವಿಚಾರಿಸುವ ಶುಶ್ರೂಷಕಿಯರ ಪಾತ್ರ ಅನನ್ಯವಾದುದು’ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ವೀರಪ್ರಸಾದ್ ಹೇಳಿದರು.

ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮ ದಿನವನ್ನು ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇವರ ಸೇವೆ ಶುಶ್ರೂಷಕಿಯರಿಗೆ ನಿಃಸ್ವಾರ್ಥ ಸೇವೆ ಮಾಡಲು ಪ್ರೇರಣೆ ನೀಡಿದೆ. ಶುಶ್ರೂಷಕಿಯರಾಗಿ ಸೇವೆ ಸಲ್ಲಿಸುವವರಿಗೆ ತಾಯಿಯ ಪ್ರೀತಿ, ತಂದೆಯ ಕರುಣೆ, ಸಹನೆ, ಸಂಯಮವಿರಬೇಕು ಎಂದರು.

ಶುಶ್ರೂಷಕಿ ಶಿಲ್ಪಕುಮಾರಿ ಪ್ಲಾರೆನ್ಸ್ ನೈಟಿಂಗೆಲ್ ಅವರ ಬಗ್ಗೆ ಮಾತನಾಡಿ, ‘ನರ್ಸಿಂಗ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅವರನ್ನು ‘ಆಧುನಿಕ ನರ್ಸಿಂಗ್ ತಾಯಿ’ ಎಂದು ಕರೆಯುತ್ತಾರೆ. ದುಃಖದಲ್ಲಿರುವ ಜನರ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ರೋಗಿಯ ಸೇವೆಯೇ ದೇವರ ಸೇವೆ ಎಂದು ನಂಬಿದ್ದರು. ತ್ಯಾಗ, ಸೇವೆ, ಮಾನವೀಯತೆ, ಜೀವದ ಹಂಗುತೊರೆದು ರೋಗಿಗಳ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿ, ಶುಶ್ರೂಷಕಿಯರು ಆಸ್ಪತ್ರೆಯ ಬೆನ್ನೆಲುಬಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಎಲ್ಲಾ ವಿಭಾಗಗಳಲ್ಲೂ ಅವರ ಸೇವೆ ಪ್ರಮುಖವಾಗಿದೆ. ಸೇವಾ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ. ಶುಶ್ರೂಷಕಿಯರು ವೈಜ್ಞಾನಿಕವಾಗಿ ಜ್ಞಾನ ಸಂಪಾದನೆ ಮಾಡಿ, ಜ್ಞಾನದ ಅನುಭವದ ಆಧಾರದ ಮೇಲೆ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ವಿಶೇಷವಾಗಿದೆ. ಕೋವಿಡ್ ಸಂದರ್ಭದಲ್ಲಿ ಶುಶ್ರೂಷಕಿಯರ ಪಾತ್ರ ಜಗತ್ತಿಗೆ ಗೊತ್ತಾಯಿತು. ಶುಶ್ರೂಷಕಿಯರು ರೋಗಿಗಳ ಆರೈಕೆ ಮಾಡುವ ಜವಾಬ್ದಾರಿಯ ಜತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ನ ನರಸಿಂಹರಾಜಪುರ ಘಟಕದ ಅಧ್ಯಕ್ಷ ಕೃಪಾಲ ಗೌಡ ಮಾತನಾಡಿದರು.

ಸೀನಿಯರ್ ಚೇಂಬರ್ನ ಖಜಾಂಚಿ ದಕ್ಷಿಣಾಮೂರ್ತಿ, ಕಾರ್ಯದರ್ಶಿ ಸೋಮಶೇಖರ್, ವಿದ್ಯಾನಂದ್, ಕೃಷ್ಣಮೂರ್ತಿ, ಶುಶ್ರೂಷಕಿಯರಾದ ದೀಪ್ತಿ, ಜೀನು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-49357595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.