ನರಸಿಂಹರಾಜಪುರ: ದುಂದುವೆಚ್ಚ ಮಾಡುವುದಕ್ಕಿಂತ ಸಾಮಾಜಿಕ ಕಾರ್ಯ ಮಾಡುವ ಮೂಲಕ ಜನ್ಮದಿನ ಆಚರಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಹೇಳಿದರು.

ಪಟ್ಟಣದ ಸುಂಕದಕಟ್ಟೆಯ ಮೈಪಾನ್ ಫಿಜಿಯೋ ಥೆರಫಿ ಕೇಂದ್ರದ ಆಸ್ಪತ್ರೆಯ ಆವರಣದಲ್ಲಿ ಗುರುವಾರ ರೋಟರಿ ಕ್ಲಬ್ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆನ್ನು ಹುರಿಯಿಂದ ಸ್ವಾಧೀನ ಕಳೆದುಕೊಂಡ ಇಂದಿರಾ ನಗರ ಸಂಜಯ್ ಎಂಬುವರಿಗೆ ಕಣಿವೆ ನಾಗ ಚಂದ್ರ ಪ್ರತಿಷ್ಠಾನದಿಂದ ₹72 ಸಾವಿರ ಮೊತ್ತದ ವಿದ್ಯುತ್ ಚಾಲಿತ ವೀಲ್ಚೇರ್ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾನ ಮಾಡುವುದರಿಂದ ದಾನ ನೀಡಿದವರಿಗೆ ಆತ್ಮತೃಪ್ತಿ ಸಿಗಲಿದೆ. ಕಳೆದ ವರ್ಷ ನನ್ನ ಜನ್ಮದಿನವನ್ನು ಮತ್ತಿಮರದ ಆಶ್ರಮದ ಅನಾಥರಿಗೆ ಆಹಾರ ಕಿಟ್ ನೀಡಿದ್ದೆ ಎಂದು ನೆನಪಿಸಿಕೊಂಡರು.

ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಟಿ.ವಿ. ವಿಜಯ್ ಮಾತನಾಡಿ, ಈ ವರ್ಷ ರೋಟರಿ ಕ್ಲಬ್ ಹಲವು ಸಾಮಾಜಿಕ ಕಾರ್ಯ ಮಾಡುವ ಮೂಲಕ ಸಂಸ್ಥೆಯ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ನ ಪೂರ್ವಾಧ್ಯಕ್ಷ ಎಸ್.ಎಸ್. ಶಾಂತಕುಮಾರ್ ಮಾತನಾಡಿ, ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಅವರು ತಮ್ಮ ಜನ್ಮದಿನದ ಪ್ರಯುಕ್ತ ಬೆನ್ನು ಹುರಿಯಿಂದ ಸ್ವಾಧೀನ ಕಳೆದುಕೊಂಡು ನಡೆಯಲು ಸಾಧ್ಯವಾಗದಿರುವ ವ್ಯಕ್ತಿಗೆ, ವೀಲ್ಚೇರ್ ನೀಡುವ ಮೂಲಕ ಜನ್ಮದಿನ ಆಚರಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಪುಷ್ಪ ಆಸ್ಪತ್ರೆಯ ವೈದ್ಯೆ ಸಿಸ್ಟರ್ ಡಾ. ಮೇರಿ ಸೂಸನ್ನ, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಎಸ್. ವಿದ್ಯಾನಂದಕುಮಾರ್, ಪುಷ್ಪ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಪ್ರಿನ್ಸಿ, ಮೈಪಾನ್ ಫಿಜಿಯಾ ಥೆರಫಿ ಆಸ್ಪತ್ರೆಯ ವೈದ್ಯ ಡಾ. ನಿಖಿಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-126-1906696895

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.