ನರಸಿಂಹರಾಜಪುರ: ‘ಒಡೆದು ಆಳುವವರ ಮಧ್ಯೆ ಕೂಡಿ ಬಾಳುತ್ತೇವೆ ಎಂಬ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಸಂದೇಶ ಸಾರುವುದು ಸರ್ವ ಸಮಾಜೋತ್ಸವದ ಉದ್ದೇಶ’ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಮಲೆನಾಡು ಕರಾವಳಿ ಜನಪರ ಒಕ್ಕೂಟ ಮೇ 3ರಂದು ಕೊಪ್ಪದಲ್ಲಿ ಆಯೋಜಿಸಿರುವ ‘ಸರ್ವ ಸಮಾಜೋತ್ಸವ ಹೀಗೊಂದು ಜನೋತ್ಸವ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಪಾರಸಿಕರೆಲ್ಲರೂ ಭಾರತಾಂಬೆ ಪಡೆದ ಮಕ್ಕಳು ಎಂಬ ಸಂದೇಶವನ್ನು ಸಮಾಜೋತ್ಸವದಲ್ಲಿ ಸಾರಲಾಗುತ್ತದೆ. ಹೊಡೆದಾಟ, ದ್ವೇಷ, ಹಿಂಸೆಯಿಂದ ನಾವು ಬೆಳೆಯಲು ಸಾಧ್ಯವಿಲ್ಲ. ರಾಜಕೀಯ ಹಿತಾಸಕ್ತಿಗಾಗಿ ಧರ್ಮಗಳ ನಡುವಿನ ಯುದ್ಧ ಭಾರತವನ್ನು ಕಟ್ಟಲು ಬಿಡಬಾರದು. ಇತಿಹಾಸದ ತಪ್ಪುಗಳಿಗೆ ವರ್ತಮಾನ ಬಲಿಯಾದರೆ, ಭವಿಷ್ಯ ಉತ್ತಮವಾಗಿರಲು ಸಾಧ್ಯವಿಲ್ಲ’ ಎಂದರು.

ದಕ್ಷಿಣ ಕನ್ನಡದ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಲಕ್ಷ್ಮೀಶ ಗಬಡ್ಕ ಮಾತನಾಡಿ, ‘ಸತ್ಯ ಮತ್ತು ಧರ್ಮ ಗೆಲ್ಲಬೇಕು. ಧರ್ಮ ಎಂಬುದು ನಂಬಿಕೆ. ಧರ್ಮವನ್ನು ಯಾವುದೇ ಸಂಘಟನೆ ಪ್ರತಿನಿಧಿಸಬಾರದು. ಹಲವಾರು ಧರ್ಮಗಳು, ಸಾವಿರಾರೂ ಭಾಷೆಗಳು, ಜನಾಂಗಗಳು, ಅನಂತ ದೈವಗಳು ಅಪರಿಮಿತ ತತ್ವಗಳು ಒಟ್ಟಾಗಿ ಸಾಗುತ್ತಿರುವ ಏಕೈಕ ದೇಶ ಭಾರತ. ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಕೂಡಿ ಬಾಳಬೇಕೆಂಬುದೇ ಸರ್ವಜನೋತ್ಸವದ ಧ್ಯೇಯ’ ಎಂದರು.

ಸರ್ವ ಸಮಾಜೋತ್ಸವದ ಅಧ್ಯಕ್ಷ ಹಸಗೋಡು ನಾಗೇಶ್ ಮಾತನಾಡಿದರು. ಮಲೆನಾಡು ಕರಾವಳಿ ಜನಪರ ಒಕ್ಕೂಟದ ನವೀನ್ ಕರವಾನೆ, ಎಂ.ಆರ್. ರವಿಶಂಕರ್, ಎಚ್.ಎಂ. ಮನು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-126-475281488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.