ನರಸಿಪುರ (ಎನ್.ಆರ್.ಪುರ): ತಾಲ್ಲೂಕಿನ ನರಸಿಪುರ ಗ್ರಾಮದ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ‘ನರಸಿಂಹ ಜಯಂತಿ ಮತ್ತು ಕವಚ ಧಾರಣೆ ಮಹೋತ್ಸವ’ ವಿಜೃಂಭಣೆಯಿಂದ ನಡೆಯಿತು.

ಶೃಂಗೇರಿಯ ದಿವಾಕರ್ ಭಟ್ರ ನೇತೃತ್ವದಲ್ಲಿ ಪುಣ್ಯಾಹ ವಾಚನ, ಕಲಶ ಪೂಜೆ, ಅಭಿಷೇಕ, ಕಲಾಹೋಮ, ಕವಚ ಧಾರಣೆ ಪ್ರಯುಕ್ತ ಅಗ್ನಿಸೂಕ್ತ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಿತು. ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದಿ.ಎಚ್.ಎಸ್.ಶಿವಸ್ವಾಮಿ, ಪದ್ಮಾ ಶಿವಸ್ವಾಮಿ, ಮಕ್ಕಳಾದ ಸ್ವರೂಪ ಹೊಸಕೆರೆ, ಮಾಲಿನಿ ಹೊಸಕೆರೆ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ನರಸಿಂಹಸ್ವಾಮಿಗೆ ರಜತ (ಬೆಳ್ಳಿಕವಚ) ದಾನವಾಗಿ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಅರ್ಚಕರಾದ ರವಿಭಟ್, ಪ್ರಶಾಂತ್ ಭಟ್ ಇದ್ದರು.

ದೇವಸ್ಥಾನದ ಹಿನ್ನೆಲೆ: ಪಾತಾಳ ನರಸಿಂಹ ದೇವಾಲಯವು ಹೊಯ್ಸಳರ ಕಾಲದಲ್ಲಿ ನಿರ್ಮಿಸಿರಬಹುದೆಂದು ದೇವಸ್ಥಾನದ ಆವರಣದಲ್ಲಿ ಲಭ್ಯವಿರುವ ಶಾಸನಗಳಿಂದ ತಿಳಿದು ಬರುತ್ತದೆ. ಬೆಂಜಮಿನ್ ಲೂಯಿರೈಸ್ ಅವರು 1908ರಲ್ಲಿ ಪ್ರಕಟಿಸಿರುವ ಎಫಿಗ್ರಾಫಿಯ ಕರ್ನಾಟಕದ 6ನೇ ಸಂಪುಟದಲ್ಲಿ ಈ ತಾಲ್ಲೂಕಿನಲ್ಲಿರುವ ಶಾಸನಗಳನ್ನು ಕೊಪ್ಪ ತಾಲ್ಲೂಕಿನಲ್ಲಿ ಸೇರಿಸಿದ್ದಾರೆ. ದೇವಸ್ಥಾನ ನಿರ್ಮಾಣದ ಬಗ್ಗೆ ಮಾಹಿತಿ ಲಭ್ಯವಾಗದಿದ್ದರೂ ಈ ದೇಗುಲದ ಮುಂಭಾಗದಲ್ಲಿರುವ ಕಲ್ಲಿನಿಂದ ಹಲವು ಅಂಶಗಳು ಬೆಳಕಿಗೆ ಬರುತ್ತವೆ. ಶಿಲೆಗಳಲ್ಲಿ ಬರೆದಿರುವ ಅಂಶಗಳನ್ನು ಗಮನಿಸಿದರೆ ಪಾತಾಳ ನರಸಿಂಹ ಶಕ್ತಿಶಾಲಿ ದೇವರು ಎಂಬುದೂ ತಿಳಿದು ಬರುತ್ತದೆ. ದೇವಸ್ಥಾನದ ಆವರಣದಲ್ಲಿ ಪುರಾತನ ಬಾವಿ, ಹಲವು ದೇವತೆಗಳ ವಿಗ್ರಹಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.