ನರಸಿಂಹರಾಜಪುರ: ದೇಶಕ್ಕೆ, ಸೈನಿಕರಿಗೆ ಹಾಗೂ ನಾಗರಿಕರಿಗೆ ಒಳಿತಾಗಲಿ, ದುಷ್ಟಶಕ್ತಿಗಳು ಸಂಹಾರವಾಗಲಿ ಎಂಬ ಉದ್ದೇಶದಿಂದ ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆದ ನರಸಿಂಹ ಜಯಂತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕರ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.

ಪಾತಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಅವರು, ‘ಮಲೆನಾಡು ಭಾಗದಲ್ಲಿ ಪ್ರಸ್ತುತ ಜಾರಿಯಾಗುತ್ತಿರುವ ಅರಣ್ಯ ಕಾಯ್ದೆ, ಕಸ್ತೂರಿರಂಗನ್ ವರದಿಯಿಂದ ರೈತರು ಮತ್ತು ನಾಗರಿಕರು ಆತಂಕದಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಯ್ದೆಗಳು ಜಾರಿಯಾಗದಂತಾಗಿ, ಜನರು ನೆಮ್ಮದಿ ಬದುಕುಕಟ್ಟಿಕೊಳ್ಳುವಂತಾಗಲಿ. ಅರಣ್ಯದಲ್ಲಿಯೇ ಕಾಡು ಪ್ರಾಣಿಗಳಿಗೆ ಯಥೇಚ್ಛ ಆಹಾರ, ನೀರು ಲಭಿಸುವಂತಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು’ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಗ್ರಾಮಸ್ಥರಾದ ರಶ್ಮಿ ದಯಾನಂದ, ನಾರಾಯಣ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.