ನರಸಿಂಹರಾಜಪುರ ತಾಲ್ಲೂಕು ಗುಳ್ಳದಮನೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಿರಿಯ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಸಹಕಾರ ಪಡೆದು ಎಲ್ಲರೊಂದಿಗೆ ಪ್ರತಿ ಮನೆ ಮನೆಗೆ ಭೇಟಿ ಮಾಡಿ ಮನವೊಲಿಸಿ ಮಕ್ಕಳನ್ನು ಕರೆದುಕೊಂಡು ಬರಲಾಗಿದೆ.
– ಶಿಲ್ಪಕುಮಾರಿ ಮುಖ್ಯ ಶಿಕ್ಷಕಿ ಗುಳ್ಳದಮನೆ ಸರ್ಕಾರಿ ಶಾಲೆ
ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಶಿಕ್ಷಕಿ ಶಿಲ್ಪಕುಮಾರಿಯ ಪ್ರಯತ್ನದಿಂದ ಶಾಲೆ ಹೊಸರೂಪ ಪಡೆದಿದ್ದು ಉತ್ತಮ ಶಿಕ್ಷಣ ಲಭಿಸಿದೆ. ಶಾಲೆ ಉಳಿದಿರುವುದರಿಂದ ನಮ್ಮ ತಂದೆ ಶಾಲೆಗೆ ಜಾಗ ದಾನ ನೀಡಿದ್ದು ಸಾರ್ಥಕವಾಗಿದೆ.
– ಜಿ.ಎಂ.ಪ್ರಕಾಶ್ ನಿರ್ದೇಶಕ ಹಿರಿಯ ವಿದ್ಯಾರ್ಥಿ ಸಂಘ
ನರಸಿಂಹರಾಜಪುರ ತಾಲ್ಲೂಕು ಗುಳ್ಳದ ಮನೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ
ನಾವು ಓದಿದ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದು ಬೇಸರವಾಗಿತ್ತು. ಹಿರಿಯ ವಿದ್ಯಾರ್ಥಿಗಳು ಗ್ರಾಮಸ್ಥರ ಸಹಕಾರದಿಂದ ಶಾಲೆ ಉಳಿಸಿದ್ದೇವೆ.
– ಎಸ್.ಎಸ್.ಸಂತೋಷ್ ಕುಮಾರ್ ಅಧ್ಯಕ್ಷ ಹಿರಿಯ ವಿದ್ಯಾರ್ಥಿ ಸಂಘ
3 ವರ್ಷದಿಂದ ಶಾಲೆಯಲ್ಲಿ ಶಿಕ್ಷಣ ದೊರೆಯದೆ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿತ್ತು. ಪ್ರಸ್ತುತ ಶಿಕ್ಷಕರು ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ.
– ವಿಜು ಎಸ್.ಡಿ.ಎಂ.ಸಿ ಅಧ್ಯಕ್ಷ ಗುಳ್ಳದಮನೆ ಸರ್ಕಾರಿ ಶಾಲೆ